ಫೆ.4-5: ಶ್ರೀ ಕ್ಷೇತ್ರ ಬರ್ಕಜೆ ಜಾತ್ರಾ ಮಹೋತ್ಸವ

0

ನಿಟ್ಟಡೆ: ಇಲ್ಲಿಯ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರ ಬರ್ಕಜೆಯಲ್ಲಿ ಫೆ.4ರಿಂದ 5ರವರೆಗೆ 8ನೇ ವರ್ಷದ ಜಾತ್ರಾ ಮಹೋತ್ಸವವು ನಡೆಯಲಿದೆ.
ಫೆ. 4ರಂದು ರಾತ್ರಿ ಶ್ರೀ ದುರ್ಗಾದೇವಿ ಗುಡಿಯಲ್ಲಿ ವಾಸ್ತು ಪೂಜೆ, ವಾಸ್ತು ಹೋಮ, ದಿಕ್‌ಬಲಿ ಜರುಗಲಿದೆ. ಫೆ.5ರಂದು ಬೆಳಿಗ್ಗೆ ನಾಗಬನದಲ್ಲಿ ಶ್ರೀ ನಾಗದೇವರಿಗೆ ತಂಬಿಲ, ಶ್ರೀ ದುರ್ಗಾದೇವಿ ಗುಡಿಯಲ್ಲಿ ಚಂಡಿಕಾಯಾಗ, ಪಂಚಾಮೃತ ಅಭಿಷೇಕ, ಸತ್ಯನಾರಾಯಣ ಪೂಜೆ, ಭಜನಾ ಕಾರ್ಯಕ್ರಮ, ಬೆಳಿಗ್ಗೆ 10.00 ಕ್ಕೆ ವಿಶೇಷ ರಂಗ ಪೂಜೆ ಮತ್ತು ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ. ಮಧ್ಯಾಹ್ನ 12.00 ಕ್ಕೆ ಪರಿವಾರ ದೈವಗಳಾದ ಮೈಸಂದಾಯ, ದುಗಲಾಯ, ಪಂಜುರ್ಲಿ, ಮೈಯಂತಿ, ಮಂತ್ರದೇವತೆ, ಸನ್ಯಾಸಿ ಗುಳಿಗ, ಕೊರಗಜ್ಜ ದೈವಗಳ ಗಗ್ಗರ ಸೇವೆ ನಡೆಯಲಿದೆ. ಸಂಜೆ 6.00 ಗಂಟೆಗೆ ನವ (9) ಗುಳಿಗಗಳ ವಿಶೇಷ ಗಗ್ಗರ ಸೇವೆ ನಡೆಯಲಿದೆ. ರಾತ್ರಿ 7ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

p>

LEAVE A REPLY

Please enter your comment!
Please enter your name here