ಪದ್ಮುಂಜ ಪ್ರೌಢ ಶಾಲೆಯಲ್ಲಿ ಕಲಿಕಾ ಹಬ್ಬ

0

ಪದ್ಮುಂಜ: ಸರಕಾರಿ ಪ್ರೌಢಶಾಲೆ ಪದ್ಮುಂಜದಲ್ಲಿ ಜ.24 ಮತ್ತು ಜ.25 ರಂದು ಎರಡು ದಿನಗಳಲ್ಲಿ ಕುಪ್ಪೆಟ್ಟಿ ಕ್ಲಸ್ಟರ್ ನ 3 ಪ್ರೌಢಶಾಲೆ ಹಾಗೂ 14 ಪ್ರಾಥಮಿಕ ಶಾಲೆಗಳ ಒಟ್ಟು 120 ವಿದ್ಯಾರ್ಥಿಗಳು ಭಾಗವಹಿಸಿ ಸಂಭ್ರಮದ ಕಲಿಕಾ ಹಬ್ಬದಲ್ಲಿ ಪಾಲ್ಗೊಂಡರು.

ಜ.24 ರಂದು ಕಲಿಕಾ ಹಬ್ಬದ ಮೊದಲ ದಿನ ಉದ್ಘಾಟನಾ ಸಮಾರಂಭ ನಡೆಯಿತು. ಅಧ್ಯಕ್ಷತೆಯನ್ನು ಶ್ರೀಮತಿ ಗಾಯತ್ರಿ ಗೋಪಾಲಗೌಡ ಅಧ್ಯಕ್ಷರು ಕಣಿಯೂರು ಗ್ರಾಮ ಪಂಚಾಯತ್, ಪಂಚಾಯತ್ ಸದಸ್ಯರುಗಳಾದ ಸೀತಾರಾಮ ಮಡಿವಾಳ, ಶ್ರೀಮತಿ ಸುಮತಿ ಶೆಟ್ಟಿ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಯುವರಾಜ ಇಂದ್ರ ಹಾಗೂ ಕೊಡುಗೈದಾನಿಗಳಾದ ಸದಾಶಿವ ಜೋಗಿ ಮತ್ತು ಕೃಷ್ಣಶೆಟ್ಟಿ ಉಪಸ್ಥಿತರಿದ್ದರು. ಸುಂದರವಾದ ಹೂವನ್ನು ವಿನೂತನ ಶೈಲಿಯಲ್ಲಿ ಅರಳಿಸುವುದು ಹಾಗೂ ಜಾದುವಿನಿಂದ ತೆಂಗಿನ ಕಾಯಿಯಿಂದ ಪುಷ್ಪವೃಷ್ಟಿ ಮಾಡುವ ಮೂಲಕ ಉದ್ಘಾಟನೆ ಮಾಡಿದ್ದು ಎಲ್ಲರ ಮನ ಸೆಳೆಯಿತು. ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುಮತಿ ಪಿ.ಎನ್ ಅವರು ಸ್ವಾಗತಿಸಿ ಕುಪ್ಪೆಟ್ಟಿ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಸಂಧ್ಯಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಬುಳೇರಿ ಮೊಗ್ರು ಪ್ರೌಢಶಾಲೆಯ ಲವೀನಾ ಪಿಂಟೋ ಧನ್ಯವಾದವಿತ್ತರು. ಸ. ಹಿ. ಪ್ರಾ.ಶಾಲೆ, ಮೈರೋಳ್ತಡ್ಕದ ಶಿಕ್ಷಕ ಮಾಧವ ಗೌಡ ಇವರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಎರಡನೇ ದಿನ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ಶ್ರೀಲತಾ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು, ಅತಿಥಿಗಳಾಗಿ ಸೀತಾರಾಮ ಮಡಿವಾಳ ಗ್ರಾಮ ಪಂಚಾಯತ್ ಸದಸ್ಯರು, ಯುವರಾಜ ಇಂದ್ರ ಸದಸ್ಯರು ಕಾಲ ಅಭಿವೃದ್ಧಿ ಸಮಿತಿ, ಸಿಎ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದ ಜಿತೇಶ್ ಅಡೆಂಜ, ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಶಿಕ್ಷಕಿ ಶ್ರೀಮತಿ ಆಶಾಲತಾ ಬಿ.ಕೆ ನಿರೂಪಿಸಿ, ಶಿಕ್ಷಕ ಸದಾನಂದ ಬಿರಾದರ್ ಸಾಗ್ವತಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಸುಮತಿ ಪಿ.ಎನ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here