ಉಜಿರೆ: ಶ್ರೀ ವನದುರ್ಗಾ ಕ್ಷೇತ್ರ ಕಲ್ಲೇ ಅಜಿತ್ ನಗರದಲ್ಲಿ ಜ.27ರಂದು ಶ್ರೀ ರಕ್ತೇಶ್ವರಿ, ಮಹಿಸಂದಾಯ, ಕಲ್ಲುರ್ಟಿ, ಪಂಜುರ್ಲಿ, ಗುಳಿಗ ದೈವಗಳ ನರ್ತನ ಸೇವೆ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಡಾ. ಹೇಮಾವತಿ ವೀ. ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಡಿ. ಹರ್ಷೇಂದ್ರ ಕುಮಾರ್ ರವರ ಸಹಕಾರ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ರವರ ಮಾರ್ಗದರ್ಶನದಲ್ಲಿ, ದೈವಜ್ಞರಾದ ಸುರತ್ಕಲ್ ನಾಗೇಂದ್ರ ಭರದ್ವಾಜರು, ಪ್ರಧಾನ ಅರ್ಚಕ ವೇ ಮೂ। ರಾಜಗೋಪಾಲ ಯಡಪಡಿತ್ತಾಯ, ಊರ ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಉಜಿರೆ, ಅನಂತ್ ಮೋಹನ್ ರಾವ್ ಮೂಡೋಟ್ಟು, ಶಾಸಕ ಹರೀಶ್ ಪೂಂಜ, ದಿ. ಯಶೋವರ್ಮ ರವರ ಪುತ್ರರಾದ ಪೂರನ್ ವರ್ಮಾ ಮತ್ತು ಪ್ರಣವ್ ವರ್ಮಾ, ಆರಿಕೋಡಿ ಕ್ಷೇತ್ರ ಧರ್ಮದರ್ಶಿ ಹರೀಶ್, ರಾಜೇಶ್ ಪೈ, ರವಿ ಚಕ್ಕಿತ್ತಾಯ, ಉಜಿರೆ ಗ್ರಾ. ಪಂ. ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಕಲ್ಮಂಜ ಗ್ರಾ. ಪಂ. ಅಧ್ಯಕ್ಷ ಶಶಿಧರ್, ಲೀಲಾವತಿ ರಾಜು ಮೇಸ್ತ್ರಿ, ಮೋಹನ್ ಕುಮಾರ್, ರೇಷ್ಮಾ, ಮೌಲ್ಯ, ಮಾನ್ವಿ, ರವಿ ಕುಮಾರ್ ಕುಟುಂಬಸ್ಥರು, ಪ್ರಕಾಶ್ ಮತ್ತು ಕುಟುಂಬಸ್ಥರು, ಜಯಂತಿ ಮಹೇಶ್ ಕುಟುಂಬಸ್ಥರು, ಲಕ್ಷ್ಮಣ್ ಸಪಲ್ಯ, ಜಯಪ್ರಕಾಶ್ ಶೆಟ್ಟಿ, ಅರುಣ್ ಕುಮಾರ್, ಕೆಂಪಯ್ಯ ಮಡಿವಾಳ, ವೆಂಕಟೇಶ್ ಶೆಟ್ಟಿ, ರಾಘವೇಂದ್ರ ಬೈಪಡಿತ್ತಾಯ, ವೆಂಕಟ್ರಮಣ ಹೆಬ್ಬಾರ್, ನಾಗರಾಜ್, ಡಾ. ಬಿ.ಎ. ಕುಮಾರ್ ಹೆಗ್ಡೆ, ತಿಮ್ಮಯ, ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.