ಮಡಂತ್ಯಾರು: ಜೇಸಿಐ ಮಡಂತ್ಯಾರು ಪ್ರಾಂತ’ ಸಿ’ ವಲಯ 15, ‘ಬಾಂಧವ್ಯ 2023’ ಇದರ ಆಶಯದಲ್ಲಿ ಬೆಳದಿಂಗಳಲ್ಲಿ ಜೇಸಿ ಚಿತ್ತಾರ ಎಂಬ ವಿನೂತನ ಕಾರ್ಯಕ್ರಮವು ಜ. 6 ರಂದು ಪಾರೆಂಕಿ ಗ್ರಾಮದ ಶ್ರೀ ರಾಮ ನಗರ ಹಾರಬೆಯಲ್ಲಿ ನಡೆಯಿತು.
ಪೂರ್ವಾಧ್ಯಕ್ಷ ಜೇಸಿ ತುಳಸಿದಾಸ್ ಪೈ ಇವರು ಸ್ಥಳೀಯ ಮಕ್ಕಳಿಗೆ ಆಟೋಟಗಳನ್ನು ಆರಂಭಿಸಿ, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಘಟಕಾಧ್ಯಕ್ಷ ಜೇಸಿ ಅಶೋಕ್ ಗುಂಡಿಯಲ್ಕೆ ವಹಿಸಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿ ಕಾರ್ಯಕ್ರಮದ ಮಹತ್ವವನ್ನು ತಿಳಿಸುವುದರೊಂದಿಗೆ, ಅತಿಥಿಗಳನ್ನು ಸ್ವಾಗತಿಸಿದರು. ಘಟಕದ ಪೂರ್ವಾಧ್ಯಕ್ಷ ಜೇಸಿ ಶ್ರೀನಾಥ್ ಬಂಗೇರವರು ಉದ್ಘಾಟಿಸಿ ನಂತರ ಮಾತನಾಡಿ ಸಂಸ್ಥೆಗೆ ಹಾಗೂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗಣ್ಯರ ಉಪಸ್ಥಿತಿಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಪಾಚು ಪೂಜಾರಿ ಹಾರಬೆ ಇವರ ಪರಿಚಯವನ್ನು ಕಾರ್ಯಕ್ರಮ ಸಂಯೋಜಕರಾದ ಜೇಸಿ ಪ್ರಶಾಂತ್ ಶೆಟ್ಟಿ ವಾಚಿಸಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಸನ್ಮಾನಿತರು ಮಾತನಾಡಿ ಜೆಸಿಐ ಮಡಂತ್ಯಾರಿನ ವಿನೂತನ ವಿಶಿಷ್ಟ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳೊಂದಿಗೆ ಶುಭ ಹಾರೈಸಿದರು. ನಂತರ ಮುಖ್ಯ ಅತಿಥಿ ಮಡಂತ್ಯಾರು ಗ್ರಾಮ ಪಂಚಾಯತಿನ ಸದಸ್ಯ ವಿಶ್ವನಾಥ್ ಪೂಜಾರಿ ಹಾರಬೆ ಮಾತನಾಡಿ ಕೋವಿಡ್ ಸಮಯದಲ್ಲಿ ಜೆಸಿಐ ಮಡಂತ್ಯಾರಿನ ಕಾರ್ಯವನ್ನು ಶ್ಲಾಘಿಸುವುದರೊಂದಿಗೆ ಅಭಿನಂದಿಸಿದರು. ನಿಕಟ ಪೂರ್ವಾಧ್ಯಕ್ಷ ಜೇಸಿ ಭರತ್ ಶೆಟ್ಟಿ ಮಾತನಾಡಿ ಬೆಳದಿಂಗಳ ಚಿತ್ತಾರದ ವಿಶೇಷತೆಯನ್ನು ಸಭೆಗೆ ತಿಳಿಸಿದರು. ನಂತರ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಜೇಸಿವಾಣಿಯನ್ನು ಜೇಸಿ ಪ್ರಭಾತ್ ಜೈನ್ ವಾಚಿಸಿದರು, ಕಾರ್ಯದರ್ಶಿ ಜೇಸಿ ವಿಕೇಶ್ ಮಾನ್ಯ ಧನ್ಯವಾದವಿತ್ತರು. ವಿವಿಧ ಸ್ಥಳೀಯ ಮಿತ್ರರು ತಂದಿದ್ದ ಕಡುಬು ಸ್ಪರ್ಧೆ ಏರ್ಪಡಿಸಿ ಬಹುಮಾನಗಳನ್ನು ವಿತರಿಸುವುದರೊಂದಿಗೆ ಸ್ಥಳೀಯರು ತಯಾರಿಸಿದ ಉಪಹಾರ ವ್ಯವಸ್ಥೆಯನ್ನು ಮಾಡಲಾಯಿತು. ಕ್ಯಾಂಪ್ ಫೈರ್ ಹಾಗೂ ವಿವಿಧ ಆಟೋಟಗಳನ್ನು ಜೇಸಿ ಅಜಯ್ ಶೆಟ್ಟಿ ನೆರವೇರಿಸಿದರು. ವಿಜೇತರಿಗೆ ವಿಶೇಷ ಬಹುಮಾನಗಳು ಘಟಕದಿಂದ ನೀಡಲ್ಪಟ್ಟವು. ಈ ಕಾರ್ಯಕ್ರಮದಲ್ಲಿ ಘಟಕದ ಪೂರ್ವಾಧ್ಯಕ್ಷರು, ಸದಸ್ಯರು ಹಾಗೂ ಸ್ಥಳೀಯ ಸುಮಾರು 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.