ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ), ಗುರುವಾಯನಕೆರೆ, ಮಹಿಳಾ ಜ್ಞಾನ ವಿಕಾಸ ಹಾಗೂ ಸರಕಾರಿಪದವಿ ಪೂರ್ವ ಕಾಲೇಜು ( ಪ್ರೌಡ ಶಾಲಾ ವಿಭಾಗ ) ವೇಣೂರು ಇವರ ಆಶ್ರಯದಲ್ಲಿ ಕಲಿಕೆ ಯಲ್ಲಿ ಹಿಂದುಳಿದ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಟ್ಯೂಷನ್ ಕ್ಲಾಸ್ ತರಬೇತಿ ಯನ್ನು ಹಮ್ಮಿಕೊಂಡಿದ್ದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೆಮಯ್ಯಕುಲಾಲ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ತಾಲೂಕಿನ ಯೋಜನಾಧಿಕಾರಿ ಯಶವಂತ್ ಯಸ್ ರವರು ಕಲಿಕೆಯಲ್ಲಿ ಹಿಂದುಳಿದ ಎಸ್ ಎಸ್ ಎಲ್ ಸಿ ಮಕ್ಕಳಿಗೆ ವಿಶೇಷವಾಗಿ ಟ್ಯೂಷನ್ ತರಬೇತಿಯನ್ನು ಹಮ್ಮಿಕೊಂಡಿದ್ದು ಎಸ್ ಎಸ್ ಎಲ್ ಸಿ ಎನ್ನುವುದು ಮಕ್ಕಳಿಗೆ ಪ್ರಾಮುಖ್ಯಘಟ್ಟ ಮುಂದಿನ ಶಿಕ್ಷಣ, ಯಾವ ವಿಭಾಗದಲ್ಲಿ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದನ್ನು ನಿರ್ಧಾರ ಮಾಡುವುದು ಎಸ್ ಎಸ್ ಎಲ್ ಸಿ ಯ ಅಂಕಪಟ್ಟಿ ಅದರಿಂದಾಗಿ ಮಕ್ಕಳು ಹೆಚ್ಚು ಅಂಕವನ್ನು ಗಳಿಸಬೇಕು ಎನ್ನುವ ಉದ್ದೇಶ ದಿಂದ ಟ್ಯೂಷನ್ ತರಭೆತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು ಹಾಗೂ ಅತೀ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಒಕ್ಕೂಟ ಮಟ್ಟದಲ್ಲಿ ಗುರುತಿಸಲಾಗುದು ಎಂದರು.
ಕಾರ್ಯಕ್ರಮ ದಲ್ಲಿ ಎಸ್ ಡಿಎಂಸಿ ಅಧ್ಯಕ್ಷರು ಹಾಗೂ ಪಂಚಾಯತ್ ಉಪಾಧ್ಯಕ್ಷರಾದ ಪುಪ್ಪಾ, ಹಿರಿಯ ಶಿಕ್ಷಕಿ ಭಾಷಿಣಿ, ಎಸ್ ಡಿಎಂಸಿ ಸದಸ್ಯರಾದ ಶೇಖರ್ ಪೂಜಾರಿ, ದಾನಿಗಳು ಮೋಹನ್ ದಾಸ್ ಹೆಗ್ಡೆ, ಟ್ಯೂಷನ್ ಶಿಕ್ಷಕಿ ಸುಶ್ಮಿತಾ, ಸೇವಾಪ್ರತಿನಿಧಿ ಜಯಂತಿ ಉಪಸ್ಥಿತರಿದ್ದರು.
ಸ್ವಾಗತ ವನ್ನು ಹಿರಿಯ ಶಿಕ್ಷಕಿ ಭಾಷಿಣಿ, ಧನ್ಯವಾದವನ್ನು ತರಗತಿ ಶಿಕ್ಷಕಿ ಜ್ಯೋತಿ, ನಿರೂಪಣೆ ಯನ್ನು ಜ್ಞಾನ ವಿಕಾಸ ಸಮನ್ವಯಧಿಕಾರಿ ಹರಿಣಿ ಮಾಡಿದರು.