ತಾಲೂಕು ಮಟ್ಟದ ಪ. ಪೂ. ಕಾಲೇಜುಗಳ ಕ್ರೀಡಾ ಕೂಟ: ನಿಂತಿಕಲ್ಲಿನ ಕೆ.ಎಸ್ ಗೌಡ ಪ. ಪೂ. ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ

0

 

ಅ. 5ರಂದು ಅರಂತೋಡಿನ ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ನಿಂತಿಕಲ್ಲಿನ ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜಿನ ಒಂಭತ್ತು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 8 ಮಂದಿ ಪ್ರಥಮ, ಓರ್ವ ದ್ವಿತೀಯ ಮತ್ತು ಎರಡು ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವರ್ಷಿಣಿ (ದ್ವಿತೀಯ ವಾಣಿಜ್ಯ ವಿಭಾಗ)ಚಕ್ರ ಎಸೆತ ಪ್ರಥಮ, ಹ್ಯಾಮರ್ ಎಸೆತ ಪ್ರಥಮ, 4*100ಮೀ ರಿಲೇ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ತೃಷಾ ( ಪ್ರಥಮ ವಿಜ್ಞಾನ ವಿಭಾಗ) 200ಮೀ. ಓಟ ಪ್ರಥಮ, 400 ಮೀ ಓಟ ಪ್ರಥಮ, 4*100 ಮೀ ರಿಲೇ ಪ್ರಥಮ,
ಪೃಥ್ವಿ ( ಪ್ರಥಮ ವಿಜ್ಞಾನ ವಿಭಾಗ) 800 ಮೀ ಓಟ ಪ್ರಥಮ, ಈಟಿ ಎಸೆತ ಪ್ರಥಮ, 4*100 ಮೀ ರಿಲೇ ಪ್ರಥಮ,
ಜೀವಿತಾ ( ದ್ವಿತೀಯ ವಾಣಿಜ್ಯ ವಿಭಾಗ) 4*100 ರಿಲೇ ಪ್ರಥಮ. ಸೃಜನ್ (ಪ್ರಥಮ ವಾಣಿಜ್ಯ ವಿಭಾಗ )ಈಟಿ ಎಸೆತ ಪ್ರಥಮ, ತ್ರಿವಿಧ ಜಿಗಿತ ತೃತೀಯ, ಜೀವನ್ (ದ್ವಿತೀಯ ವಿಜ್ಞಾನ ವಿಭಾಗ) 400 ಮೀ ಓಟ ದ್ವಿತೀಯ, ಶೋಭಿತ್ ಕುಮಾರ್ ಕೆ ( ದ್ವಿತೀಯ ವಾಣಿಜ್ಯ ವಿಭಾಗ) 800 ಮೀ ಓಟ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಬಹುಮಾನವನ್ನು ಪಡೆದರು. ಕ್ರೀಡಾ ಪಟುಗಳಿಗೆ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಉಜ್ವಲ್ ಕೆ.ಎಚ್ ಮತ್ತು ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ತರಬೇತಿ ನೀಡುತ್ತಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ‌.ಎಸ್ ಅಭಿನಂದಿಸಿದರು.

LEAVE A REPLY

Please enter your comment!
Please enter your name here