ಗ್ರಾ. ಪಂ. ಸದಸ್ಯೆ ನಾಪತ್ತೆ : ದೂರು ದಾಖಲು

0

 

ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ಯಾಗಿರುವ ಐನೆಕಿದು ಗ್ರಾಮದ 33 ವರ್ಷದ ಭಾರತಿ ಮೂಕಮಲೆ ಯವರು ಅ.29 ರಂದು ಕಾಣೆಯಾಗಿರುವುದಾಗಿ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.

ಭಾರತಿಯವರ ಪತಿ ದೂರು ನೀಡಿದ್ದು, ಪತ್ನಿ ಅ.29 ಮಧ್ಯಾಹ್ನ ತನಕ ಕೆಲಸಕ್ಕೆ ಹೋಗಿ ಬಳಿಕ ಮರಳಿ ಮನೆಗೆ ಹೋಗಿ ತಾಯಿ ಸರಸ್ವತಿ ಹಾಗೂ ಅತ್ತೆ ಭವಾನಿ ಯವರ ಚಿಕಿತ್ಸೆಗೆ ಸಂಬಂಧಿಸಿ ಕಾಣಿಯೂರು ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಪತಿಯ ತಾಯಿ ಮತ್ತು ಅತ್ತೆಗೆ ಚಿಕಿತ್ಸೆ ಕೊಡಿಸಿ ಬಂದಿದ್ದು ವಾಪಸ್ಸು ಮನೆಗೆ ಬಂದಿಲ್ಲ. ಸಂಬಂಧಿಕರಲ್ಲಿ ವಿಚಾರಿಸಿದಾಗ ಎಲ್ಲಿಯೂ ಕಂಡು ಬಂದಿಲ್ಲ . ಬಳಿಕ ಆಕೆಯ ಮೊಬೈಲ್‌ ಪೋನ್‌ಗೆ ಕರೆ ಮಾಡಿದಾಗ ಆಕೆಯ ಪೋನ್‌ ಸ್ವೀಚ್‌ ಆಪ್‌ ಆಗಿರುತ್ತದೆ ಎಂದು ದೂರಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here