ಡಿಸೆಂಬರ್ ನಲ್ಲಿ ಸುಳ್ಯದಲ್ಲಿ ಬೃಹತ್ ಕೃಷಿ ಮೇಳ

0

 

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆ

ಮಂಗಳೂರಿನ ಪ್ರಣವ ಸೌಹಾರ್ದ ಸಹಕಾರಿ ನಿಯಮಿತ, ಸಹಕಾರಿ ಯೂನಿಯನ್, ರೈತ ಉತ್ಪಾದಕ ಕಂಪೆನಿ ಸುಳ್ಯ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಡಿಸೆಂಬರ್ ತಿಂಗಳಿನಲ್ಲಿ ಸುಳ್ಯದ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯುವ ಬೃಹತ್ ಕೃಷಿ ಮೇಳದ ಪೂರ್ವಭಾವಿ ಸಭೆ ಸುಳ್ಯ ತಾಲೂಕು ಪಂಚಾಯತ್ ನ ಪಯಸ್ವಿನಿ ಸಭಾಂಗಣದಲ್ಲಿ ಅ. 28 ರಂದು ನಡೆಯಿತು.


ಪ್ರಣವ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಕೃಷಿ ಮೇಳದ ರೂಪುರೇಶೆಗಳ ಬಗ್ಗೆ ವಿವರಿಸಿದರು.

ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗದ ಚಂದ್ರಹಾಸ್ ಕುಂದರ್, ಸಂತೋಷ್ ಶೆಟ್ಟಿ , ಸೋಮಪ್ಪ ನಾಯ್ಕ ಉಪಸ್ಥಿತರಿದ್ದು ವಿವರ ನೀಡಿದರು.


ಕೃಷಿ ಮೇಳದಲ್ಲಿ ಪಾರಂಪರಿಕ ಗ್ರಾಮದ ರಚನೆಯ ಬಗ್ಗೆ ಸುಧಾಕರ ಶೆಟ್ಟಿ, ಮುಕೇಶ್ ರವರು ವಿವರಿಸಿದರು.

ಪೂರ್ವಭಾವಿ ಸಭೆಯಲ್ಲಿ ಸುಳ್ಯ ಶಾಖಾ ಸಲಹಾ ಸಮಿತಿ ಸದಸ್ಯರಾದ ಸಂತೋಷ್ ಜಾಕೆ, ಗುರುದತ್ ನಾಯಕ್, ಕರ್ನಾಟಕ ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ ತೀರ್ಥರಾಮ,
ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕಂದಡ್ಕ, ಸುಳ್ಯ ರೈತ ಉತ್ಪಾದಕ ಕಂಪೆನಿ ಅಧ್ಯಕ್ಷ ವೀರಪ್ಪ ಗೌಡ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ,
ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ ರಾಮಚಂದ್ರ, ದ.ಕ ಜಿಲ್ಲಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರು, ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ನಿರ್ದೇಶಕ
ಪಿ.ಎಸ್ ಗಂಗಾಧರ, ಉಬರಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ರೈ ಉಬರಡ್ಕ, ಕೆವಿಜಿ ಐಟಿಐ ಉಪನ್ಯಾಸಕ ಭವಾನಿಶಂಕರ ಅಡ್ತಲೆ, ಪ್ರಣವ ಸಹಕಾರಿ ಸಂಘದ ಸುಳ್ಯ ಶಾಖಾ ವ್ಯವಸ್ಥಾಪಕಿ ಮನಸ್ವಿ, ಕೃಷಿ ಮೇಳದ ಸಂಯೋಜಕ, ಪ್ರಣವದ ಸಿಬ್ಬಂದಿ ರಂಜಿತ್ ಅಡ್ತಲೆ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆ ನೀಡಿದರು.

ಮುಂದಿನ ವಾರ ಸಚಿವ ಎಸ್. ಅಂಗಾರರವರ ನೇತೃತ್ವದಲ್ಲಿ ಎಲ್ಲ ಸಂಘ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ಸಭೆ ನಡೆಸುವುದೆಂದು ತೀರ್ಮಾನಿಸಲಾಯಿತು.

LEAVE A REPLY

Please enter your comment!
Please enter your name here