ಪೆರಾಜೆ : ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಅಂಗವಾಗಿ ಮೃತ್ತಿಕೆ ಸಂಗ್ರಹಣೆ

0

ಪ್ರತೀ ಗ್ರಾಮಗಳಿಂದ ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಪ್ರತಿಮೆ ಉದ್ಘಾಟನೆ ಅಂಗವಾಗಿ ಪವಿತ್ರ ಮೃತ್ತಿಕೆ ಸಂಗ್ರಹಣೆ ಮಾಡಲಾಗುತ್ತಿದ್ದು ನಿನ್ನೆ ಪೆರಾಜೆ ಗ್ರಾಮ ಪಂಚಾಯತ್‌ನಿಂದ ಪವಿತ್ರ ಮೃತ್ತಿಕೆ( ಮಣ್ಣು) ಸಂಗ್ರಹಣೆಗೆ ನಾಡಪ್ರಭು ಕೆಂಪೇಗೌಡರ ರಥವು ಪೆರಾಜೆಗೆ ಆಗಮಿಸಿದ್ದು ಶ್ರೀ ಶಾಸ್ತಾವು ದೇವಸ್ಥಾನದ ಬಳಿಯಿಂದ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಿ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಕೆಜಿ ಬೋಪಯ್ಯ , ಡಿಸಿಸಿ ಬ್ಯಾಂಕ್ ಕೊಡಗು ಅಧ್ಯಕ್ಷ ಮನು ಮುತ್ತಪ್ಪ, ಗ್ರಾಮಾಂತರ ಮಂಡಲದ ಅಧ್ಯಕ್ಷ ಕಾಂಗಿರ ಸತೀಶ್, ಕಾರ್ಯದರ್ಶಿ ಕೋಡಿರ ಪ್ರಸನ್ನ, ಮಹೇಶ್ ಪವಿತ್ರ ಮಣ್ಣನ್ನು ಸ್ವೀಕರಿಸಿದರು.


ಗ್ರಾಮದ ಪರವಾಗಿ ಅಕ್ರಮ ಸಕ್ರಮ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ , ದೇವಸ್ತಾನದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ ,ಕಾರ್ಯದರ್ಶಿ ತೇಜಪ್ರಸಾದ ಅಮಚೂರು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಚಂದ್ರಕಲ, ಉಪಾಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ, ಗ್ರಾಮ ಪಂಚಾಯತ್ ಸದಸ್ಯರು, ಪಿಡಿಒ ಪ್ರಭು, ಕಾರ್ಯದರ್ಶಿ ಕುಮಾರ್, ಪಂಚಾಯತ್ ಸಿಬಂದಿಗಳು , ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಅಶೋಕ್ ಪೆರುಮುಂಡ, ನಿರ್ದೇಶಕರು. ಸಂಜೀವಿ ಒಕ್ಕೂಟದ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಇದ್ದರು.
ಸಂಜೀವಿ ಒಕ್ಕೂಟದ ಸದಸ್ಯರು ಪೂರ್ಣ ಕುಂಭದೊಂದಿಗೆ ರಥವನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here