ಕಾಣಿಯೂರು ಜವಳಿ ವ್ಯಾಪಾರಸ್ಥರ ಮೇಲೆ ನಡೆಸಿದ ಗುಂಪು ಹಲ್ಲೆ ಖಂಡಿಸಿ ಕರ್ನಾಟಕ ಮುಸ್ಲಿಂ ಕೌನ್ಸಿಲ್ ವತಿಯಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ

0

ಕಡಬ ತಾಲೂಕಿನ ಕಾಣಿಯೂರಿನಲ್ಲಿ ಜವಳಿ ವ್ಯಾಪಾರಸ್ಥರ ಮೇಲೆ ನಡೆದಿರುವ ಗುಂಪು ಹಲ್ಲೆಯನ್ನು ಖಂಡಿಸಿ ಕರ್ನಾಟಕ ಮುಸ್ಲಿಂ ಕೌನ್ಸಿಲ್ ವತಿಯಿಂದ ಇಂದು ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಎಂ ಶಹೀದ್ ವಹಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೇವಲ ಮುಸಲ್ಮಾನರು ಎಂಬ ವೈ ಮನಸನ್ನು ಹೊಂದಿಕೊಂಡು ಸಮಾಜದ ಕೆಲವು ಮತಿಯ ಸಂಘಟನೆಯ ಕಾರ್ಯಕರ್ತರು ಅಮಾಯಕರ ಮೇಲೆ ಹಲ್ಲಿಯನ್ನು ನಡೆಸಿ ದಬ್ಬಾಳಿಕೆಯನ್ನು ಮಾಡುತ್ತಿದ್ದಾರೆ. ಇದನ್ನು ಭಾರತ ದೇಶದಲ್ಲಿ ವಾಸಿಸುವ ಯಾವುದೇ ಮುಸಲ್ಮಾನರು ಇದನ್ನು ಸಹಿಸಲು ಸಾಧ್ಯವಿಲ್ಲ. ಏಕೆಂದರೆ ದೇಶದಲ್ಲಿ ಉತ್ತಮ ಜೀವನವನ್ನು ನಡೆಸುವ ಪ್ರತಿಯೊಬ್ಬ ಹಿಂದೂ ಬಾಂಧವರು ಸೌಹಾರ್ದತೆಯ ಬಾಳನ್ನು ಇಷ್ಟಪಡುವವರಾಗಿದ್ದಾರೆ. ಒಂದು ಧರ್ಮದಲ್ಲಿ ಯಾರು ಒಬ್ಬರು ಅಥವಾ ಇಬ್ಬರು ಮಾಡುವ ತಪ್ಪನ್ನು ಇಡೀ ಸಮುದಾಯದ ಮೇಲೆ ಹೇರುವುದು ಸರಿಯಾದ ರೀತಿಯಲ್ಲ ಎಂದು ಹೇಳಿದರು.
ಈ ಪ್ರತಿಭಟನೆ ಯಾವುದೇ ಸಮುದಾಯದವರನ್ನು ನೋಯಿಸುವ ಉದ್ದೇಶದಿಂದ ಮಾಡುತ್ತಿಲ್ಲ. ನಮಗಾಗಿರುವ ನೋವನ್ನು ಪ್ರತಿಭಟಿಸುವುದಕ್ಕಾಗಿ ಇಂದು ನಾವು ರಸ್ತೆಗೆ ಇಳಿಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಈ ಪ್ರತಿಭಟನಾ ಸಭೆಯಲ್ಲಿ ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ್, ಮುಖಂಡರಾದ ಸದಾನಂದ ಮಾವಂಜಿ, ಸತ್ಯ ಕುಮಾರ್ ಅಡಿಂಜ, ಕೆಪೆಕ್ ಮಾಜಿ ನಿರ್ದೇಶಕ ಹಾಜಿ ಪಿ ಎ ಮಹಮ್ಮದ್, ಮುಸ್ಲಿಂ ಸಂಘಟನೆಯ ಮುಖಂಡರಾದ ಇಬ್ರಾಹಿಂ ಹಾಜಿ ಕತಾರ್ ಮಂಡೆಕೋಲು, ಇಸ್ಮಾಯಿಲ್ ಪಡಿಪಿನಂಗಡಿ, ಹಾಜಿ ಉಮ್ಮರ್ ಗೂನಡ್ಕ, ಮಜೀದ್ ನಡವಡ್ಕ, ಅಶ್ರಫ್ ಗುಂಡಿ, ಶರೀಫ್ ಕಂಠಿ, ಸಿದ್ದೀಕ್ ಕೋಕೋ ಮೊದಲಾದವರು ಉಪಸ್ಥಿತರಿದ್ದರು. ಹಾಜಿ ಮುಸ್ತಫಾ ಜನತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here