ಗುತ್ತಿಗಾರು ಗ್ರಾಮದ ಬಳ್ಳಕ್ಕ ದಿ. ಹೊನ್ನಪ್ಪ ನಾಯ್ಕರ ಪತ್ನಿ ಶ್ರೀಮತಿ ಗಿರಿಜಾ ಅ. 23ರಂದು ನಿಧನರಾದರು. ಇವರಿಗೆ 76 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಕುಶಾಲಪ್ಪ ನಾಯ್ಕ ಬಳ್ಳಕ್ಕ, ಜನಾರ್ಧನ ನಾಯ್ಕ ಬಳ್ಳಕ್ಕ, ಪುತ್ರಿಯರಾದ ಶ್ರೀಮತಿ ವಿಮಲಾ ಬಳ್ಳಕ್ಕ, ಶ್ರೀಮತಿ ಶಿವಮ್ಮ, ಶ್ರೀಮತಿ ತಂಗಮ್ಮ, ಶ್ರೀಮತಿ ಲಲಿತಾ ಕಾಣಿಯೂರು ಸೇರಿದಂತೆ ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.