ಸುಳ್ಯದಲ್ಲಿ ಜೈ ಕಿಸಾನ್ ಟ್ರೇಡರ್‍ಸ್ ಕೃಷಿ ಉತ್ಪನ್ನ ಖರೀದಿ ಕೇಂದ್ರ ಶುಭಾರಂಭ

0

 

 

ವ್ಯಾಪಾರದಲ್ಲಿ ಪರಿಶುದ್ಧತೆ ಇದ್ದಾಗ ಯಶಸ್ಸು : ಸಚಿವ ಎಸ್.ಅಂಗಾರ

ಸುಳ್ಯ ಗಾಂಧಿನಗರದಲ್ಲಿ ಸುಬೋದ್ ಶೆಟ್ಟಿ ಮೇನಾಲ, ತೀರ್ಥಕುಮಾರ್ ಕುಂಚಡ್ಕ, ವಿಕ್ರಮ್ ಅಡ್ಪಂಗಾಯ ಹಾಗೂ ನವೀನ್ ಕುಮಾರ್ ಮೇನಾಲರ ಪಾಲುದಾರಿಕೆಯಲ್ಲಿ ಆರಂಭಗೊಂಡಿರುವ ಜೈ ಕಿಸಾನ್ ಟ್ರೇಡರ್‍ಸ್ ಕೃಷಿ ಉತ್ಪನ್ನ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭ ಅ.೧೯ರಂದು ನಡೆಯಿತು.


ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ದೀಪ ಬೆಳಗಿ ಸಂಸ್ಥೆಯನ್ನು ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, “ರೈತರಿಂದಲೇ ಆರಂಭಗೊಂಡ ಅಡಿಕೆ ಖರೀದಿ ಕೇಂದ್ರ ಸುಳ್ಯದಲ್ಲಿ ಇದೇ ಮೊದಲು ಆರಂಭಗೊಂಡಿದೆ. ರೈತರೇ ಇಂತ ಸಂಸ್ಥೆಯನ್ನು ತೆರೆದಾಗ ರೈತ ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗಲು ಸಾಧ್ಯ. ವ್ಯಾಪಾರದಲ್ಲಿ ಪರಿಶುದ್ಧತೆ ಇದ್ದರೆ ವ್ಯಾಪಾರ ತನ್ನಿಂತಾನೆ ವೃದ್ಧಿಯಾಗುತ್ತದೆ. ಸರಕಾರಕ್ಕೆ ತೆರಿಗೆ ವಂಚನೆ ಮಾಡದೇ ವ್ಯಾಪಾರ ನಡೆಸಿದಾಗ ಕೇಂದ್ರ ಮತ್ತು ರಾಜ್ಯ ಸರಕಾರಗಳೂ ಪ್ರೋತ್ಸಾಹ ನೀಡುತ್ತದೆ” ಎಂದು ಅವರು ಹೇಳಿದರು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸಿದರು. “ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಕ್ಕಿದಾಗ ದೇಶದ ಆರ್ಥಿಕತೆಯೂ ಬಲಗೊಳ್ಳುತ್ತದೆ” ಎಂದು ಹೇಳಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ, “ಬೆಳೆಯುತ್ತಿರುವ ಸುಳ್ಯಕ್ಕೆ ಜೈ ಕಿಸಾನ್ ಟ್ರೇಡರ್‍ಸ್ ಹೊಸ ಕೊಡುಗೆ. ಇದು ಇನ್ನಷ್ಟು ವಿಸ್ತಾರಗೊಳ್ಳುತ್ತ ಮುಂದೆ ಸಾಗಲಿ” ಎಂದು ಹೇಳಿದರು.
ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಹಾಗೂ ಉದ್ಯಮಿ ಕೃಷಿ ಕಾಮತ್ ಶುಭ ಹಾರೈಸಿದರು.
ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ.ತೀರ್ಥರಾಮ, ಭಾರತೀಯ ರಬ್ಬರ್ ಮಂಡಳಿ ನಿರ್ದೇಶಕ ಕೇಶವ ಭಟ್ ಮುಳಿಯ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ನ.ಪಂ. ಮಾಜಿ ಅಧ್ಯಕ್ಷ ಕೆ.ಪ್ರಕಾಶ್ ಹೆಗ್ಡೆ, ತಾ.ಪಂ. ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಕೆ. ಉಮೇಶ್, ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ, ಆಲೆಟ್ಟಿ ಸಹಕಾರಿ ಸಂಘದ ಅಧ್ಯಕ್ಷ ಶ್ರೀಪತಿ ಭಟ್, ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಬರಡ್ಕ ಮಿತ್ತೂರು ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ, ನ.ಪಂ. ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಉದ್ಯಮಿ ಸುಧಾಕರ ಕಾಮತ್, ಕೃಷಿಕರಾದ ಭಾಸ್ಕರ್ ರಾವ್ ಬಯಂಬು, ಶಿವರಾಮ ಗೌಡ ಮಾಣಿಬೆಟ್ಟು, ಮಧುಸೂದನ್ ಕಸ್ತೂರಿ ನರ್ಸರಿ, ಡಾ.ಎನ್.ಎ.ಜ್ಞಾನೇಶ್, ಪ್ರದ್ಯುಮ್ನ ಉಬರಡ್ಕ, ಡಾ.ಕೇಶವ ಪಿ.ಕೆ., ಪೇರಾಲು ಬಜಪ್ಪಿಲ ಶ್ರೀ ಉಳ್ಳಾಕುಲು ಕ್ಷೇತ್ರ ಮೊಕ್ತೇಸರ ಹೇಮಂತ್ ಕುಮಾರ್ ಗೌಡರಮನೆ, ಸುಳ್ಯ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಕ್ಯಾಂಪ್ಕೋ ನಿವೃತ್ತ ಎ.ಜಿ.ಎಂ. ಲೋಕೇಶ್, ಉದ್ಯಮಿ ಮುಕುಂದ ನಾರ್ಕೊಡು, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ವಿನಯ ಕುಮಾರ್ ಮುಳುಗಾಡು, ಸುಳ್ಯ ಶಶಿ ಕಾಂಪ್ಲೆಕ್ಸ್ ಮಾಲಕ ಶಶಿಧರ್ (ಡಿಸ್ಕೊ), ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಗಳ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಗಿರೀಶ್, ಸುಳ್ಯ ಸಿ.ಎ. ಬ್ಯಾಂಕ್ ನಿರ್ದೇಶಕ ಎ.ಎಸ್. ಮನ್ಮಥ, ದ.ಕ. ಜಿಲ್ಲಾ ಜೇನು ವ್ಯವಸಾಹಗಾರರ ಸೊಸೈಟಿ ಅಧ್ಯಕ್ಷ ಚಂದ್ರ ಕೋಲ್ಚಾರು ಅತಿಥಿಗಳಾಗಿದ್ದರು.
ಸಂಸ್ಥೆಯ ಪಾಲುದಾರ ಸುಭೋದ್ ಶೆಟ್ಟಿ ಮೇನಾಲ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ವಿಕ್ರಂ ಅಡ್ಪಂಗಾಯ ವಂದಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here