ಮಾಲಾಡಿ: ಕೊಲ್ಪೆದಬೈಲು ಪಲ್ಕೆ ಎಂಬಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ: 3 ಲಕ್ಷ ರೂ ಗಿಂತಲೂ ಅಧಿಕ ನಷ್ಟ

0

ಮಾಲಾಡಿ: ಇಲ್ಲಿಯ ಕೊಲ್ಪೆದಬೈಲು ಪಲ್ಕೆ ಎಂಬಲ್ಲಿ ಝೀನತ್ ಎಂಬವರ ಮನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಮನೆ ಸಂಪೂರ್ಣ ಸುಟ್ಟು ಹೋದ ಘಟನೆ ನ.17ರಂದು ರಾತ್ರಿ ವೇಳೆ ನಡೆದಿದೆ.

ಝೀನತ್ ರವರು ತಮ್ಮ 3 ಮಕ್ಕಳೊಂದಿಗೆ ತಾಯಿ ಮನೆಗೆ ಹೋಗಿದ್ದರು. ಇಂದು ಬೆಳಗ್ಗೆ ಮನೆಗೆ ವಾಪಾಸಾದ ಸಂದರ್ಭದಲ್ಲಿ ಮನೆಯ ಒಳಗೆ ನೋಡಿದಾಗ ಅಡುಗೆಕೋಣೆಯಲ್ಲಿದ್ದ ಫ್ರಿಡ್ಜ್ ಹಾಗೂ ಎಲ್ಲಾ ಸಾಮಾಗ್ರಿಗಳು ಸುಟ್ಟು ಕರಕಲಾಗಿತ್ತು. ಸುಮಾರು 3 ಲಕ್ಷ ರೂಪಾಯಿಗಿಂತಲೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಸ್ಥಳಕ್ಕಾಗಮಿಸಿದ ವಿ.ಎ ತಿಳಿಸಿದರು. ಈ ಸಂದರ್ಭದಲ್ಲಿ ಜೆ.ಇ ಕೂಡ ಆಗಮಿಸಿ ಪರಿಶೀಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here