ಬಂಗಾಡಿ ಪರಿಸರದಲ್ಲಿ ಮಕ್ಕಳನ್ನು ಹಿಡಿಯುವವರು ಪ್ರತ್ಯಕ್ಷ ಸಾಮಾಜಿಕ ತಾಣದಲ್ಲಿ ವೈರಲ್ ಆದ ಪೋಸ್ಟ್ – ಶಾಲಾ‌ವತಿಯಿಂದ‌ ಪೊಲೀಸರಿಗೆ ದೂರು – ತಮಾಷೆಗಾಗಿ ಮಕ್ಕಳನ್ನು ಹೆದರಿಸಿದ ಯುವಕರ ತಂಡ ಎಂಬ ವದಂತಿ

0

ಬಂಗಾಡಿ: ಸರಕಾರಿ ಪ್ರೌಢಶಾಲೆ ಬಂಗಾಡಿ ಪರಿಸರದಲ್ಲಿ ಮಕ್ಕಳನ್ನು ಹಿಡಿಯುವವರು ಪ್ರತ್ಯಕ್ಷರಾಗಿದ್ದಾರೆ, ಪೋಷಕರೇ ಜಾಗೃತೆ ವಹಿಸಿ ಎಂಬ ವಿಷಯವನ್ನು ಯಾರೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದು ಮಕ್ಕಳ ಅಪಹರಣ ಎಂಬ ವದಂತಿಗೆ ಕಾರಣವಾಗಿ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.

ನಿನ್ನೆ ಬಂಗಾಡಿ ಪ್ರೌಢ ಶಾಲಾ ಬಳಿ ಯಾರೋ ಅಪರಿಚಿತ ವ್ಯಕ್ತಿಗಳು ಕಾರೊಂದನ್ನು ನಿಲ್ಲಿಸಿ ಅಲ್ಲಿಯ ಶಾಲಾ ವಿದ್ಯಾರ್ಥಿಯನ್ನು ಬೆದರಿಸಿರುವುದಾಗಿ ಹೇಳಲಾಗುತ್ತಿದೆ. ಇದನ್ನು ಮಕ್ಕಳು ಪೋಷಕರ ಗಮನಕ್ಕೆ ತಂದಿದ್ದು, ಬಳಿಕ ಯಾರೋ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳನ್ನು ಹಿಡಿಯುವವರು ಪ್ರತ್ಯಕ್ಷರಾಗಿದ್ದಾರೆ ಎಂದು ಪೊಸ್ಟ್ ಹಾಕಿದ್ದು, ಬಹಳಷ್ಟು ವೈರಲ್ ಆಗುತ್ತಿದೆ.
ಶಾಲಾ ವಿದ್ಯಾರ್ಥಿಗಳು ರಸ್ತೆಯಲ್ಲಿ ತೆರಳುತ್ತಿರುವಾಗ ಅಪರಿಚಿತ ವ್ಯಕ್ತಿಗಳು ಕಾರೊಂದನ್ನು ನಿಲ್ಲಿಸಿ ಮಕ್ಕಳನ್ನು ಬೆದರಿಸಿದ್ದಾರೆ. ಹೆದರಿ ವಿದ್ಯಾರ್ಥಿಗಳು ಓಡಿಹೋಗಿರುವುದಾಗಿದ್ದು, ವಿದ್ಯಾರ್ಥಿಗಳು ತಮ್ಮ ಪೋಷಕರ ಗಮನಕ್ಕೆ ತಂದಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಶಾಲಾ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ನಡುವೆ ಈ ಪರಿಸರದ ಯುವಕರ ತಂಡವೊಂದು ತಮಾಷೆಗಾಗಿ ಮಕ್ಕಳನ್ನು ಹೆದರಿಸಿದ್ದರು ಎಂಬ ವಿಚಾರದ ಬಗ್ಗೆಯೂ ಬಂಗಾಡಿ ಪರಿಸರದಲ್ಲಿ ಚರ್ಚೆಯಾಗುತ್ತಿದೆ.

LEAVE A REPLY

Please enter your comment!
Please enter your name here