ನಿವೃತ್ತ ಅಂಚೆ ಪಾಲಕ ಹೀರ್ಯ ಗುತ್ತು ಮನೆ ಸಂಜೀವ ಗೌಡ ನಿಧನ

0


ಕಳಿಯ : ಇಲ್ಲಿಯ ಕಳಿಯ ಗ್ರಾಮದ ಹೀರ್ಯ ಗೌಡತ್ತಿಗೆ ಮನೆ, ನಿವೃತ್ತ ಅಂಚೆ ಪಾಲಕ ಸಂಜೀವ ಗೌಡ (72 ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ನ.7 ರಂದು ಸ್ವ ಗ್ರಹದಲ್ಲಿ ನಿಧನರಾದರು.

ಮೃತರು ಕೊಯ್ಯೂರು ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.  ಪ್ರಗತಿಪರ ಕೃಷಿಕರಾಗಿ ಕಳಿಯ ಗ್ರಾಮದ ಒಕ್ಕಲಿಗರ ಸೇವಾ ಸಮಿತಿ ಗೌರವಾಧ್ಯಕ್ಷರಾಗಿ,ಕಳಿಯ ಬದಿನಡೆ ದೇವಸ್ಥಾನ ಪರಿಚಾರಕರಾಗಿ,ಧಾರ್ಮಿಕ ಮುಖಂಡರಾಗಿ, ಕಳಿಯ ಗ್ರಾಮ ಜಾತಿ ಸಮುದಾಯ ಮಾರ್ಗದರ್ಶರಾಗಿದ್ದರು.

ಮೃತರು ಪತ್ನಿ ರೋಹಿಣಿ, 2 ಗಂಡು 2 ಹೆಣ್ಣು ಮಕ್ಕಳು ಹಾಗೂ ಓರ್ವ ಸಹೋದರ ಡಾಕಯ್ಯ ಗೌಡ ಗೇರುಕಟ್ಟೆ ಅಂಚೆ ಕಚೇರಿಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ.   ಅಳಿಯಂದಿರು,ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here