







ಉಜಿರೆ: ಪುತ್ತೂರಿನ ನೆಹರು ನಗರದಲ್ಲಿರುವ ಸುದಾನ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಗ್ರಾಮೀಣ ಐಟಿ ಕ್ವಿಜ್ ಸ್ಪರ್ಧೆಯಲ್ಲಿ ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಕ್ಲೇರಿಸ್ಸಾ ನಿಯೋನ ರೋಡ್ರಿಗಸ್ ಅತ್ಯುತ್ತಮ ಸಾಧನೆಗೈದು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.


ವಿದ್ಯಾರ್ಥಿನಿಯ ಈ ಸಾಧನೆಯು ಶಾಲೆಗೆ ಹೆಮ್ಮೆ ತಂದಿದ್ದು, ಅವರ ಮುಂದಿನ ಸ್ಪರ್ಧಾ ಹಂತದಲ್ಲಿಯೂ ಯಶಸ್ಸು ಲಭಿಸಲಿ ಎಂದು ಹಾರೈಸಲಾಗಿದೆ.
ಈ ಸಾಧನೆಗಾಗಿ ಶಾಲಾ ಸಂಚಾಲಕರು, ಪ್ರಾಂಶುಪಾಲರು, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕ್ಲೇರಿಸ್ಸಾ ನಿಯೋನ ರೋಡ್ರಿಗಸ್ ಅವರನ್ನು ಅಭಿನಂದಿಸಿ, ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.









