






ಗುರುವಾಯನಕೆರೆ : ಇಲ್ಲಿನ ಎಕ್ಸೆಲ್ ಟೆಕ್ನೋ ಶಾಲೆ ಹಾಗೂ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್, ಕಾಪು ಇವರ ಆಶ್ರಯದಲ್ಲಿ ಆಯೋಜಿಸಲಾದ ಎಕ್ಸೆಲ್ ಚೆಸ್ ಟ್ರೋಫಿ ಅಂತರ್ ಶಾಲಾ ಚೆಸ್ ಸ್ಪರ್ಧೆ – 2026ರ ಉದ್ಘಾಟನೆಯನ್ನು ಶ್ರೀ ನಾರಾಯಣ ಗುರು ಸ್ಪೋರ್ಟ್ಸ್ ಆ್ಯಂಡ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಉಮಾನಾಥ ಕಾಪು ನೆರವೇರಿಸಿದರು.



ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಂತರರಾಷ್ಟ್ರೀಯ ಚೆಸ್ ಪಟು ಹಾಗೂ ಸ್ಪ್ರಿಂಗರ್ ಚೆಸ್ ಅಕಾಡೆಮಿಯ ಸ್ಥಾಪಕ ಶಾಬ್ದಿಕ್ ವರ್ಮ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸೆಲ್ ಸಂಸ್ಥೆಯ ಸ್ಥಾಪಕ ಸುಮಂತ್ ಜೈನ್ ವಹಿಸಿದ್ದರು.
ಪ್ರಾಂಶುಪಾಲರಾದ ಸುಮಿತ್ರ ಗೌಡ ಹಾಗೂ ಮುಖ್ಯ ತೀರ್ಪುಗಾರರಾದ ಸಾಕ್ಷಾತ್ ಯು.ಕೆ. ಉಪಸ್ಥಿತರಿದ್ದರು. ಪಂದ್ಯಾಟದಲ್ಲಿ ಸುಮಾರು 250 ಕ್ಕಿಂತ ಹೆಚ್ಚು ಆಟಗಾರರು ಭಾಗವಹಿಸಿದರು.









