






ಕಳೆಂಜ: ಶಿಶಿಲ–ಬೈರಾಪುರ ರಸ್ತೆ ಹಕ್ಕೊತ್ತಾಯ ಸಮಿತಿಯ ವತಿಯಿಂದ ಕಳೆಂಜ ಗ್ರಾಮದ ಸಮಾಲೋಚನಾ ಸಭೆಯು ಅ.24ರಂದು ಸಂಜೆ ಶಿಬರಾಜೆ ಪಾದೆಯ ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಯ ಆವರಣದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಕಾರ್ಯದರ್ಶಿ ಧರ್ಮರಾಜ್ ಗೌಡ ಅಡ್ಕಾಡಿ ಅವರು, ಶಿಶಿಲ–ಬೈರಾಪುರ ರಸ್ತೆ ಅಭಿವೃದ್ಧಿಯಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಆಗುವ ಪ್ರಯೋಜನಗಳ ಕುರಿತು ವಿವರಿಸಿದರು.


ರಸ್ತೆ ಸಂಪರ್ಕದ ಬೇಡಿಕೆಗೆ ಬಲ ತುಂಬಲು ನವೆಂಬರ್ 2ರಂದು ಅರಸಿನಮಕ್ಕಿಯಲ್ಲಿ ನಡೆಯುವ ಬೃಹತ್ ಹಕ್ಕೊತ್ತಾಯ ಸಮಾವೇಶದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು.
ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಗೌಡ, ನಿಡ್ಲೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಟಿ.ಎಸ್. ನಿತ್ಯಾನಂದ ರೈ, ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಪಿ.ಟಿ. ಸೆಬಾಸ್ಟಿಯನ್, ಕಳೆಂಜ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀಧರ್ ರಾವ್ ಕಾಯಡ, ಜೆಸಿಐ ಪೂರ್ವಾಧ್ಯಕ್ಷ ಸಂತೋಷ್ ಜೈನ್ ವಲಂಬಳ, ಪ್ರವೀಣ್ ಬಟ್ಯಾಲ್ ಸೇರಿದಂತೆ ಗ್ರಾಮದ ಅನೇಕ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಹೋರಾಟ ಸಮಿತಿಯ ಕರುಣಾಕರ ಶಿಶಿಲ, ಸುಂದರ ಎಂ.ಕೆ. ಹಾಗೂ ಗೌರೀಶ್ ಉಪಸ್ಥಿತರಿದ್ದರು.









