






ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 59ನೇ ವರ್ಧಂತ್ಯುತ್ಸವದ ಶುಭ ಸಂದರ್ಭದಲ್ಲಿ ಬೆಳ್ತಂಗಡಿ ವಕೀಲರ ಸಂಘದ ಪದಾಧಿಕಾರಿಗಳು ಶ್ರೀಕ್ಷೇತ್ರದಲ್ಲಿ ಹೆಗ್ಗಡೆಯವರನ್ನು ನೇರವಾಗಿ ಭೇಟಿಯಾಗಿ ಭಾವಪೂರ್ಣ ಶುಭಾಶಯಗಳನ್ನು ಕೋರಿದರು.


ಧರ್ಮಾಧಿಕಾರಿಗಳನ್ನು ಭೇಟಿಯಾದ ನಿಯೋಗದಲ್ಲಿದ್ದ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ಅಲೋಸಿಸ್ ಎಸ್. ಲೋಬೊ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ., ನಿಕಟಪೂರ್ವ ಅಧ್ಯಕ್ಷರಾದ ವಸಂತ ಮರಕಡ, ಹಿರಿಯ ನ್ಯಾಯವಾದಿ ಬಿ. ಕೆ. ಧನಂಜಯ ರಾವ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ಜೊತೆ ಕಾರ್ಯದರ್ಶಿಯೂ, ಬೆಳ್ತಂಗಡಿ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿಯೂ ಆದ ನವೀನ್ ಬಿ. ಕೆ. ಅವರು ಪೂಜ್ಯ ಹೆಗ್ಗಡೆಯವರಿಗೆ ಗೌರವಾದರಗಳೊಂದಿಗೆ ಶುಭಕೋರಿ ಆಶೀರ್ವಾದ ಪಡೆದರು.
ಇದೇ ಸಂದರ್ಭದಲ್ಲಿ ವಕೀಲರ ನಿಯೋಗವು ಕರಾವಳಿ ಭಾಗದ ನ್ಯಾಯಾಂಗ ಕ್ಷೇತ್ರದ ಸುದೀರ್ಘ ಬೇಡಿಕೆಯಾಗಿರುವ ‘ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ’ಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಹೋರಾಟದ ರೂಪರೇಷೆಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು









