ಗುರುವಾಯನಕೆರೆ ರತ್ನಗಿರಿಯಲ್ಲಿ ಮನೆ ಮೇಲೆ ಉರುಳಿದ ಮರ; ತಪ್ಪಿದ ಭಾರೀ ಅನಾಹುತ!

0

ಗುರುವಾಯನಕೆರೆ: ರತ್ನಗಿರಿಯಲ್ಲಿರುವ ಶ್ರೀಧರ್ ಶೆಟ್ಟಿ ಎಂಬವರ ಮನೆ ಮೇಲೆ ಮರ ಬಿದ್ದು ಮನೆಯ ಭಾಗಕ್ಕೆ ಹಾನಿಯಾಗಿದೆ. ಘಟನೆಯ ವೇಳೆ ಮನೆಯಲ್ಲಿ ಗಂಡ, ಹೆಂಡತಿ ಹಾಗೂ ಮಗಳು ಇದ್ದರೂ, ಅವರು ಪಕ್ಕದ ಕೋಣೆಯಲ್ಲಿ ಮಲಗಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಿಶೇಷವೆಂದರೆ, ಎರಡು ದಿನಗಳ ಹಿಂದೆ ಮನೆಗೆ ನೆಂಟರು ಬಂದಿದ್ದು, ಮರ ಬಿದ್ದು ಹಾನಿಗೊಳಗಾದ ಇದೇ ಕೋಣೆಯಲ್ಲಿ ಮಲಗಿದ್ದರು ಎನ್ನಲಾಗಿದೆ. ಅವರು ನಿನ್ನೆ ಅವರ ಮನೆಗೆ ತೆರಳಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.ಒಂದು ವೇಳೆ ಎರಡು ದಿನಗಳ ಹಿಂದೆಯೇ ಮರ ಬಿದ್ದಿದ್ದರೆ, ಈ ಕೋಣೆಯಲ್ಲಿ ಮಲಗಿದ್ದ ನೆಂಟರಿಗೆ ಅಪಾಯ ಸಂಭವಿಸುವ ಸಾಧ್ಯತೆಯಿತ್ತು. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸದೆ, ಮನೆಗೆ ಮಾತ್ರ ಹಾನಿಯಾಗಿದೆ.

LEAVE A REPLY

Please enter your comment!
Please enter your name here