ಮಾಣಿಲದಲ್ಲಿ “ಸ್ವಾತಿಮುತ್ತು” ಪುಸ್ತಕ ಬಿಡುಗಡೆ

0

ಜೈ ಶ್ರೀರಾಮ್ ಗೆಳೆಯರ ಬಳಗ ಶ್ರೀರಾಮನಗರ ಬಂದಾರು ಇದರ ಹೆಮ್ಮೆಯ ಸದಸ್ಯರಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ತನ್ನದೆ ಆದ ಹೆಸರು ಮಾಡಿಕೊಂಡು ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಚಂದ್ರಹಾಸ ಕುಂಬಾರ ಬಂದಾರು ಇವರ ದ್ವಿತೀಯ ಕೃತಿ “ಸ್ವಾತಿಮುತ್ತು” ಚುಟುಕುಗಳ ಹನಿ ಅ.22 ತಾರೀಕಿನಂದು ಮಾಣಿಲ ಕ್ಷೇತ್ರದಲ್ಲಿ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಬಿಡುಗಡೆ ಮಾಡಲಾಯಿತು.

ಈ ಚುಟುಕು ಹನಿಗೆ ತುಲುನಾಡ ಕಂಚಿದ ಸ್ವರಬಿರ್ಸೆ ಎನ್ನುವ ಹೆಸರು ಪಡೆದ ಶ್ರೀ ಎಚ್ಕೆ ನಯನಾಡು ಇವರು ಮುನ್ನುಡಿ ಬರೆದುಸಾಹಿತಿಗಳಾದ ಶ್ರೀ ಶ್ಯಾಮ್ ಪ್ರಸಾದ್ ಭಟ್ ಉಡುಪಿ ಇವರು ಬೆನ್ನುಡಿ ಬರೆದಿರುತ್ತಾರೆ.ಹಾಗೂ ಈ ಪುಸ್ತಕದ ಮುಖಪುಟವನ್ನು ಸಾಹಿತಿಗಳು ಪದ್ಮನಾಭ ಪೂಜಾರಿ ಬಂಟ್ವಾಳ ಇವರು ವಿನ್ಯಾಸ ಮಾಡಿರುತ್ತಾರೆ

ದೀಕ್ಷಿತ್ ಎರ್ಮಾಳ ಇವರು ಮಂಜುಶ್ರೀ ಪ್ರಿಂಟರ್ಸ್ ಉಜಿರೆ ಇಲ್ಲಿ ಸುಂದರವಾಗಿ ಮುದ್ರಣ ಮಾಡಿರುತ್ತಾರೆ.ಕೃತಿ ಬಿಡುಗಡೆಯ ಸಮಯದಲ್ಲಿನಾಡೋಜ ಮಹೇಶ್ ಜೋಶಿ, ಎಚ್ಕೆ ನಯನಾಡು ವಕೀಲ ಉದಯ್ ಕುಮಾರ್ ಬಿ.ಕೆ, ಜೈ ಶ್ರೀರಾಮ್ ಗೆಳೆಯರ ಬಳಗದ ಅಧ್ಯಕ್ಷ ಶ್ರೀಧರ್ ಬಿ.ಕೆ ಜೊತೆಗಿದ್ದರು.

LEAVE A REPLY

Please enter your comment!
Please enter your name here