ನಿಯತಿ ನೃತ್ಯ ನಿಕೇತನದಲ್ಲಿ ಸರಸ್ವತಿ ಪೂಜೆ ಹಾಗೂ ಗೆಜ್ಜೆ ಪೂಜೆ

0

ಮಡಂತ್ಯಾರು: ನಿಯತಿ ನೃತ್ಯ ನಿಕೇತನದ ವತಿಯಿಂದ ಸೋಮವಾರ ಮಡಂತ್ಯಾರಿನ ಬಸವನಗುಡಿಯ ವಿಶ್ವಕರ್ಮ ಸಭಾಭವನದಲ್ಲಿ ಸರಸ್ವತಿ ಪೂಜೆ ಹಾಗೂ ಗೆಜ್ಜೆ ಪೂಜಾ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಿತು.

ನಿಯತಿ ನೃತ್ಯ ನಿಕೇತನದ ಮಾತೃಶಾಖೆಯಾದ ಮಡಂತ್ಯಾರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪುಂಜಾಲಕಟ್ಟೆ, ಅಳದಂಗಡಿ ಹಾಗೂ ವೇಣೂರು ಶಾಖೆಗಳ ವಿದ್ಯಾರ್ಥಿಗಳು ಒಟ್ಟಾಗಿ ಭಾಗವಹಿಸಿದರು.

ವಿದ್ಯಾದೇವತೆ ಸರಸ್ವತಿಯ ಆರಾಧನೆಯೊಂದಿಗೆ ಮಕ್ಕಳ ನೃತ್ಯ ಕಲಿಕೆಯ ಪಯಣಕ್ಕೆ ಶುಭ ಹಾರೈಸಲಾಯಿತು. ವಿದ್ಯಾರ್ಥಿಗಳಿಗೆ ಸಂಪ್ರದಾಯದಂತೆ ಗೆಜ್ಜೆ ಪೂಜೆ ನೆರವೇರಿಸಲಾಯಿತು.ಕಾರ್ಯಕ್ರಮದಲ್ಲಿ ಸ್ವಾಗತವನ್ನು ಸಿಂಚನ ನಾಯಕ್ ನೆರವೇರಿಸಿದರು. ಧನುಶ್ರೀ ಕುಲಾಲ್ ಪಿಲ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

ರಿತಿಕಾ ಶೆಣೈ ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮದ ಸಂಯೋಜನೆಯನ್ನು ಎಂ. ಕೆ. ಪ್ರಸಾದ್ ವಹಿಸಿಕೊಂಡಿದ್ದರು. ನಿಯತಿ ನೃತ್ಯ ನಿಕೇತನದ ನೃತ್ಯಗುರು ಹಾಗೂ ನಿರ್ದೇಶಕರಾದ ವಿದುಷಿ ಶ್ರೀಮತಿ ನಿಶಾ ಪ್ರಸಾದ್ ಮಾಣೂರು ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.

ಎಲ್ಲಾ ಶಾಖೆಗಳ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರಿ ಗುರುಗಳ ಆಶೀರ್ವಾದ ಪಡೆಯುವ ಮೂಲಕ ಕಲೆಯ ಮೇಲಿನ ಭಕ್ತಿ, ಶಿಸ್ತು ಹಾಗೂ ಸಂಸ್ಥೆಯ ಒಗ್ಗಟ್ಟನ್ನು ಸಾರಿದರು.

LEAVE A REPLY

Please enter your comment!
Please enter your name here