ನಾವೂರು ಶಾಲೆಯಲ್ಲಿ ಸಂಭ್ರಮದ “ಗುರುವಂದನಾ ಮತ್ತು ಸ್ನೇಹ ಸಮ್ಮಿಲನ” ಪೋಸ್ಟರ್ ಬಿಡುಗಡೆ​

0

ನಾವೂರು: ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ನಾವೂರು ಸಂಸ್ಥೆಯ 2009-2010ನೇ ಸಾಲಿನ ಬ್ಯಾಚ್ ವಿದ್ಯಾರ್ಥಿಗಳು ಆಯೋಜಿಸಲಿರುವ “ಗುರುವಂದನಾ ಮತ್ತು ಸ್ನೇಹ ಸಮ್ಮಿಲನ” ಕಾರ್ಯಕ್ರಮದ ಅಧಿಕೃತ ಪೋಸ್ಟರ್ ಬಿಡುಗಡೆ ಹಾಗೂ ಉದ್ಘಾಟನಾ ಸಮಾರಂಭವು ಶಾಲಾ ಆವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.​

16 ವರ್ಷಗಳ ಸುದೀರ್ಘ ಅವಧಿಯ ನಂತರ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ತಮಗೆ ಅಕ್ಷರ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸುವ ಹಾಗೂ ಬಾಲ್ಯದ ನೆನಪುಗಳನ್ನು ಮೆಲಕು ಹಾಕುವ ಸದುದ್ದೇಶದಿಂದ ಈ ಸ್ನೇಹ ಸಮ್ಮಿಲನವನ್ನು ಹಮ್ಮಿಕೊಳ್ಳಲಾಗಿದೆ.​

ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್‌ಡಿಎಮ್‌ಸಿ – ಅಧ್ಯಕ್ಷ ಡಾ. ಪ್ರದೀಪ್ (SDMC)​,ಮುಖ್ಯ ಶಿಕ್ಷಕ ರೋಹಿಣಿ, ಉಮೇಶ್ ಪ್ರಭು – ಉಪಾಧ್ಯಕ್ಷರು ​ಗಣೇಶ್ ಗೌಡ – ನಿಕಟಪೂರ್ವ ಅಧ್ಯಕ್ಷರು, ಗ್ರಾಮ ಪಂಚಾಯತ್​ಇವರೆಲ್ಲರೂ ಜಂಟಿಯಾಗಿ ಭಿತ್ತಿಪತ್ರವನ್ನು (ಪೋಸ್ಟರ್) ಅನಾವರಣಗೊಳಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

​ಕಾರ್ಯಕ್ರಮದ ಆರಂಭದಲ್ಲಿ ಪ್ರದೀಪ್ ಗೌಡ ನಗಾಜೆ ಅವರು ಪ್ರಸ್ತಾವಿಕ ಭಾಷಣದೊಂದಿಗೆ ಬಂದಂತಹ ಎಲ್ಲರನ್ನೂ ಆದರದಿಂದ ಸ್ವಾಗತಿಸಿದರು.​

ಈ ಶುಭ ಸಮಾರಂಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎಲ್ಲಾ ಗೌರವಾನ್ವಿತ ಶಿಕ್ಷಕ-ಶಿಕ್ಷಕಿಯರು, ಶಾಲಾ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಹಾಗೂ 2009-10ನೇ ಬ್ಯಾಚ್‌ನ ಹಳೆಯ ವಿದ್ಯಾರ್ಥಿ ಬಳಗವು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here