ಕನ್ನಾಜೆಯಲ್ಲಿ ವಿಜೃಂಭಣೆಯಿಂದ ಭಜನಾ ಮಂಗಲೋತ್ಸವ

0

ಕನ್ನಾಜೆ: ಶ್ರೀ ದುರ್ಗಾ ಭಜನಾ ಮಂದಿರ ಕನ್ನಾಜೆಯಲ್ಲಿ ನವರಾತ್ರಿಯ ಪ್ರಯುಕ್ತ ಭಜನಾ ಮಂಗಲೋತ್ಸವ ಕಾರ್ಯಕ್ರಮವು ಅ. 19ರ ಅತ್ಯಂತ ವಿಜೃಂಭಣೆಯಿಂದ ಜರುಗಿತು.ಭಜನಾ ಮಂಗಲೋತ್ಸವದ ಉದ್ಘಾಟನೆಯನ್ನು ಉದ್ಯಮಿ, ಬದುಕು ಕಟ್ಟೋಣ ತಂಡದ ಸಂಚಾಲಕ ಹಾಗೂ ಲಕ್ಷ್ಮಿ ಗ್ರೂಪ್ಸ್ ಕನಸಿನ ಮನೆ ಇದರ ಮಾಲಕರು ನೆರವೇರಿಸಿದರು.

ಅನಂತರ ವಿವಿಧ ಭಜನಾ ತಂಡಗಳಿಂದ ಸಂಜೆಯವರೆಗೆ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಯೂರ ಸ್ವಸಹಾಯ ಸಂಘ ಕನ್ನಾಜೆ ಇವರ ವತಿಯಿಂದ ಅನ್ನದಾನ ಸೇವೆ ನಡೆಯಿತು.ಸಂಜೆ 6.30 ಕ್ಕೆ ಭಜನಾ ಮಂಗಲೋತ್ಸವ ಮುಕ್ತಾಯಗೊಂಡ ನಂತರ ಶ್ರೀ ದುರ್ಗಾ ನಮಸ್ಕಾರ ಪೂಜೆ ನಡೆಯಿತು. ಬಳಿಕ ಅನ್ನದಾನ ಸೇವೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಊರ-ಪರವೂರ ಭಜನಾ ತಂಡಗಳು ಹಾಗೂ ಅಪಾರ ಭಕ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here