






ಬೆಳಾಲು : ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ 2026 ಅ. 11ರಿಂದ 19ರ ವರೆಗೆ ಪ್ರತಿದಿನ ವಿವಿಧ ವೈದಿಕ ಕಾರ್ಯಕ್ರಮ ಗಳೊಂದಿಗೆ, ವಾಹನ ಪೂಜೆ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ. ಮಹಾ ಪೂಜೆ ಅನ್ನ ಸಂತರ್ಪಣೆಯೊಂದಿಗೆ ನಡೆಯಿತು.


ಅ. 19ರಂದು ಬೆಳಿಗ್ಗೆ ನಾಗತಂಬಿಲ ಸೇವೆ,ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ ಮತ್ತು ಮಹಿಳೆಯರಿಗೆ ರವಿಕೆ ಕಣ ಹಾಗೂ ಬಳೆ ವಿತರಣೆ ನಡೆಯಿತು. ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಮೋಕ್ತೆಸರ ಡೊಂಬಯ್ಯ ಗೌಡ, ವಸಂತ ಗೌಡ ಆಗಮಿಸಿ ಭಜನಾ ಸೇವೆ ಗೈದ ಭಜನಾ ಮಂಡಳಿಗಳ ಸದಸ್ಯರನ್ನು ಗೌರವಿಸಿದರು.
ಪ್ರತಿದಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.









