ಶಿಶಿಲ: ದೀಪಾವಳಿ ಹಬ್ಬದ ಪ್ರಯುಕ್ತ ದೋಸೆ ಹಬ್ಬ ಮತ್ತು ಹಗ್ಗಜಗ್ಗಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಶಿಶಿಲ: ಶಿಶಿಲ ಗ್ರಾಮದ ಉಮ್ಮಂತಿಮ್ಮರು ನಲ್ಲಿ. ಅಡ್ಡಹಳ್ಳ ಫ್ರೆಂಡ್ಸ್ ಆಯೋಜಿಸುತ್ತಿರುವ ದೀಪಾವಳಿ ಹಬ್ಬದ ಪ್ರಯುಕ್ತ ದೋಸೆ ಹಬ್ಬ ಮತ್ತು ಹಗ್ಗಜಗ್ಗಾಟ ಸ್ಪರ್ಧೆಯ ಆಮಂತ್ರಣ ಪತ್ರಿಕೆಯನ್ನು ಇಂದು ಬಿಡುಗಡೆ ಮಾಡಲಾಯಿತು.

ಅಡ್ಡಹಳ್ಳದಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮವು ಬರುವ ನವೆಂಬರ್ 7, ಶನಿವಾರದಂದು ಜರುಗಲಿದೆ. ಆಮಂತ್ರಣ ಪತ್ರಿಕೆಯನ್ನು ಶಿವಶಕ್ತಿ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ಮಾಧವ ಅವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮಾಧವ ಅವರು, “ಅಡ್ಡಹಳ್ಳ ಫ್ರೆಂಡ್ಸ್ ನಂತಹ ಯುವ ತಂಡಗಳು ಹಬ್ಬದ ಜೊತೆಗೆ ಒಗ್ಗಟ್ಟನ್ನು ಬೆಳೆಸುವ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ. ದೋಸೆ ಹಬ್ಬದ ಮೂಲಕ ಎಲ್ಲರನ್ನು ಒಂದೆಡೆ ಸೇರಿಸುವ ಇವರ ಪ್ರಯತ್ನಕ್ಕೆ ನಮ್ಮ ಸಂಘದ ಸಂಪೂರ್ಣ ಬೆಂಬಲವಿದೆ” ಎಂದು ಹೇಳಿದರು.

ಮತ್ತೆ ಮಾತನಾಡಿದ ಅವರು, “ಹಗ್ಗಜಗ್ಗಾಟದಂತಹ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳು ಇಂದಿನ ಯುವಕರಲ್ಲಿ ಹಬ್ಬದ ಉತ್ಸಾಹದ ಜೊತೆಗೆ ಆರೋಗ್ಯಕರ ಪೈಪೋಟಿಯನ್ನು ಹೆಚ್ಚಿಸುತ್ತವೆ. ಈ ಕಾರ್ಯಕ್ರಮ ಯಶಸ್ವಿಯಾಗಲಿ” ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅಡ್ಡಹಳ್ಳ ಫ್ರೆಂಡ್ಸ್ ನ ಅಧ್ಯಕ್ಷರು ಕರುಣಾಕರ ಶಿಶಿಲ, ಕಾರ್ಯದರ್ಶಿ ಉಮೇಶ್ ಅಡ್ಡಹಳ್ಳ, ರಿಕ್ಷಾ ಚಾಲಕ ಮಾಲಕ ಸಂಘದ ಉಪಾಧ್ಯಕ್ಷ ರಾಧಾಕೃಷ್ಣ ಗುತ್ತು, ಕಾರ್ಯದರ್ಶಿ ಸುಮಂತ್, ಸದಸ್ಯರಾದ ವಸಂತ ಗೌಡ ಅಡ್ಡಹಳ್ಳ, ಸಂದೀಪ್ ಅಮ್ಮುಡಂಗೆ, ಸಂತೋಷ್ ನಾಗನಡ್ಕ, ಗೌತಮ್, ಹರಿಪ್ರಸಾದ್, ಚರಣ್, ಪುನೀತ್, ನಿತಿನ್, ತನ್ವಿತ್, ತಮ್ಮಯ್ಯ, ಲಕ್ಷಣ ಅಡ್ಡಹಳ್ಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here