ಬೆಳಾಲು ಅನಂತೋಡಿ ದೇವಸ್ಥಾನದ ಜಾತ್ರಾಮಹೋತ್ಸವ ಪ್ರಧಾನ ಸಂಚಾಲಕರಾಗಿ ಸರೋಜಿನಿ ಭೀಮಂಡೆ

0

ಬೆಳಾಲು : ಇಲ್ಲಿಯ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಜಾತ್ರಾ ಮಹೋತ್ಸವದ ಈ ವರ್ಷದ ಪ್ರಧಾನ ಸಂಚಾಲಕರಾಗಿ ಸರೋಜಿನಿ ಭೀಮಂಡೆ ಇವರನ್ನು ಆಯ್ಕೆ ಮಾಡಲಾಯಿತು.

ಡಿಸೆಂಬರ್ 25 ಮತ್ತು 26 ರಂದು ನಡೆಯುವ ವಾರ್ಷಿಕ ಜಾತ್ರಾಮಹೋತ್ಸವ ಹಾಗೂ ಪರಿವಾರ ದೈವಗಳ ನರ್ತನ ಸೇವೆಯ ಬಗ್ಗೆ ಪೂರ್ವಭಾವಿ ಸಭೆಯು ದೇವಸ್ಥಾನದ ಅಕ್ಷೋಭ್ಯ ಭವನದಲ್ಲಿ ಅ. 18 ರಂದು ನಡೆದ ಸಭೆಯಲ್ಲಿಇವರನ್ನು ಆಯ್ಕೆ ಮಾಡಲಾಯಿತು.

ಮತ್ತು ಜಾತ್ರೋತ್ಸವಕ್ಕೆ ವಿವಿಧ ಉಪಸಮಿತಿಗಳಿಗೆ ಸಂಚಾಲಕರು ಹಾಗೂ ಸಹ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here