ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ನವರಾತ್ರಿ ವಿಶೇಷ ಪೂಜೆ, ಚಂಡಿಕಾ ಯಾಗ

0

ಧರ್ಮಸ್ಥಳ: ಕನ್ಯಾಡಿ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್‌ನಲ್ಲಿ ಪ್ರತಿಷ್ಠಾಪನೆ ಗೊಂಡಿರುವ ಮಹಾಶಕ್ತಿ ಸ್ವರೂಪಿಣಿಯರಾದ ನವದುರ್ಗೆಯರ ದಿವ್ಯ ಸಾನಿಧ್ಯದಲ್ಲಿ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಸ್ವಾಮಿ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ಉಪಸ್ಥಿತಿಯಲ್ಲಿ ಅ. 11ರಿಂದ ಅ.20ರವರೆಗೆ ನವರಾತ್ರಿ ವಿಶೇಷ ಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಜರಗಿತು.

ಅ. 19 ರಂದು ಶ್ರೀ ಸಿದ್ಧಿದಾತ್ರಿ ದೇವಿಗೆ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ, ಚಂಡಿಕಾಯಾಗ ನಡೆಯಿತು. ಸೇವಾಕರ್ತರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಅ. 11ರಂದು ಶೈಲಪುತ್ರಿ ದೇವಿ ಹಾಗೂ ಅನ್ನಛತ್ರ ಶ್ರೀ ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜೆ, ಅ. 12 ರಂದು ಬ್ರಾಹ್ಮೀಣಿ ದೇವಿಗೆ, ಅ. 13ರಂದು ಚಂದ್ರಘಂಟಾ ದೇವಿಗೆ, ಅ. 14ರಂದು ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಪೂಜೆ, ದುರ್ಗಾ ಪೂಜೆ, ಅ.15 ರಂದು ಸ್ಕಂದಮಾತಾ ದೇವಿಗೆ ಅ. 16 ಕಲ್ಯಾಣಿ ದೇವಿಗೆ, ಅ. 17 ಕಾಳರಾತ್ರಿ ದೇವಿಗೆ, ಅ. 18 ಮಹಾಗೌರಿ ದೇವಿಗೆ ವಿಶೇಷ ಪೂಜೆ ನೆರವೇರಿತು. ಅ. 20ರಂದು ಆಯುಧ ಪೂಜೆ, ಅ. 21 ರಂದು ವಿಜಯದಶಮಿ ವಿಶೇಷ ಪೂಜೆ ನಡೆಯಲಿದೆ.

LEAVE A REPLY

Please enter your comment!
Please enter your name here