ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭವಾಣಿ ವಿದ್ಯಾಸಂಸ್ಥೆ ನಂಬಿಕೆ ಹಾಗೂ ವಿಶ್ವಾಸದ ಪ್ರತೀಕ: ಜಿ. ವಾಸುದೇವ ಗೌಡ

0

ಬೆಳ್ತಂಗಡಿ: ಶಿಕ್ಷಣ ವ್ಯಕ್ತಿಯ ಜೀವನವನ್ನು ಬದಲಾಯಿಸಬಲ್ಲ ಸಾಧನ. ವಾಣಿ ವಿದ್ಯಾಸಂಸ್ಥೆ ನಂಬಿಕೆ ಹಾಗೂ ವಿಶ್ವಾಸದ ಪ್ರತೀಕ. ಪಿಯುಸಿ ನಂತರದ ಜೀವನದಲ್ಲಿ ಹೊಸ ಅಧ್ಯಾಯ ಆರಂಭಗೊಳ್ಳುತ್ತದೆ. ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಕನಸುಗಳನ್ನು ನನಸಾಗಿಸಲು ನಿರಂತರವಾಗಿ ಶ್ರಮಿಸಬೇಕು. ಅತಿಯಾದ ಮೊಬೈಲ್ ಬಳಕೆ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಮೊಬೈಲ್ ನಮ್ಮ ನಿಯಂತ್ರಣದಲ್ಲಿರಬೇಕು, ನಾವು ಮೊಬೈಲ್ ನಿಯಂತ್ರಣದಲ್ಲಿರ ಬಾರದು ಎಂದು ಪುಂಜಾಲಕಟ್ಟೆ ಅಕ್ಷಯ ಫುಡ್ಸ್ ಮಾಲಕ ಜಿ. ವಾಸುದೇವ ಗೌಡ ಹೇಳಿದರು.

ಅವರು ಅ. ೧೮ರಂದು ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸಭಾಭವನದಲ್ಲಿ ಸಂಘದ ವತಿಯಿಂದ ನಡೆದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಹಾಗೂ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು.

ಪ್ರಧಾನ ಭಾಷಣಗಾರರಾದ ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರು ಹಾಗೂ ಸಂಯೋಜಕ ಡಾ. ರವಿ ಎಂ.ಎನ್. ಅವರು ಮಾತನಾಡಿ, ವಿದ್ಯಾರ್ಥಿಗಳು ಬಹುಮುಖ ಪ್ರತಿಭೆಗಳಾಗಬೇಕು ಎಂಬ ಉದ್ದೇಶದಿಂದ ವಾಣಿ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಇಂತಹ ಕಾರ್ಯಯೋಜನೆಗಳನ್ನು ನಡೆಸುತ್ತಿದೆ. ವಾಣಿ ಸಂಸ್ಥೆ ಎನ್.ಎಸ್.ಎಸ್.ಗೆ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ. ವಿದ್ಯಾರ್ಥಿಗಳು ಪುಸ್ತಕದ ಹುಳುಗಳಾಗಬಾರದು. ಜೀವನದಲ್ಲಿ ಅಂಕಗಳು ಬೇಕು, ಆದರೆ ಅದುವೇ ಜೀವನವಲ್ಲ. ಸಂವೇದನಶೀಲ ಬದುಕಿನಿಂದ ಪ್ರತಿಭಾವಂತರಾಗಲು ಸಾಧ್ಯ ಎಂದರು.

ಮತ್ತೋರ್ವ ಪ್ರಧಾನ ಭಾಷಣಗಾರರಾದ ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಚೇತನ್ ಆನೆಗುಂಡಿ ಮಾತನಾಡಿ, ಹೆತ್ತವರು ಮಕ್ಕಳಿಗೆ ಆಸ್ತಿಗಳನ್ನು ಮಾಡುವ ಬದಲು ಮಕ್ಕಳನ್ನೇ ಆಸ್ತಿಗಳನ್ನಾಗಿ ಬೆಳೆಸಬೇಕು. ಮಕ್ಕಳ ಮನಸ್ಥಿತಿಯನ್ನು ಅರ್ಥೈಸಿಕೊಂಡು ಸಮಾಜ ಕಟ್ಟುವ ಕೆಲಸವಾಗಬೇಕು. ಅಂಕಗಳ ಜೊತೆಗೆ ಕೌಶಲ್ಯವೂ ಬೇಕು. ಇದು ಯಶಸ್ಸಿನ ಗುಟ್ಟು. ನಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ತರಬೇತಿ ಅಗತ್ಯವಿದೆ. ಸಮಾಜದಲ್ಲಿ ನಮ್ಮ ಹೆಜ್ಜೆಗುರುತು ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದರು.

ವೇದಿಕೆಯಲ್ಲಿ ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಪುಷ್ಪಗಿರಿ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ಧರ್ನಪ್ಪ ಗೌಡ, ಡಿ.ಎಂ. ಗೌಡ, ಕಾರ್ಯದರ್ಶಿ ಗಣೇಶ್ ಗೌಡ, ಮಾಜಿ ಅಧ್ಯಕ್ಷ ಸೋಮೇ ಗೌಡ, ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ.ಎಂ., ಪ್ರತಿಭಾ ಪುರಸ್ಕಾರದ ಸಂಚಾಲಕ ಯುವರಾಜ್ ಅನಾರ್, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ ಸವಣಾಲು, ನಿರ್ದೇಶಕರಾದ ಗೋಪಾಲಕೃಷ್ಣ ಗುಲ್ಲೋಡಿ, ಬಾಲಕೃಷ್ಣ ಗೌಡ ಬಿರ್ಮೋಟ್ಟು, ವಿಜಯ್ ಕುಮಾರ್ ನ್ಯಾಯತರ್ಪು, ಉಷಾದೇವಿ, ಹರೀಶ್ ಗೌಡ ಬಂದಾರು, ಮಾಧವ ಗೌಡ, ದಿನೇಶ್ ಗೌಡ ಕೊಯ್ಯೂರು, ವಸಂತ ಗೌಡ, ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಕಾರ್ಯದರ್ಶಿ ಸುರೇಶ್ ಗೌಡ ಕೌಡಂಗೆ ಹಾಗೂ ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಳೆಕೋಟೆ ಬೆಳ್ತಂಗಡಿಯ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸರ್ವ ಸದಸ್ಯರು, ಮಹಿಳಾ ವೇದಿಕೆ, ಯುವ ವೇದಿಕೆ ಹಾಗೂ ಸ್ಪಂದನಾ ಸೇವಾ ಸಂಘ, ಹಳೆಕೋಟೆ, ಬೆಳ್ತಂಗಡಿ ಇದರ ಸರ್ವ ಸದಸ್ಯರು, ವಾಣಿ ಸೌಹಾರ್ದ ಕೋ-ಆಪರೇಟಿವ್, ಹಳೆಕೋಟೆ, ಬೆಳ್ತಂಗಡಿ ಇದರ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರು ಉಪಸ್ಥಿತರಿದ್ದರು.

ಜಯಾನಂದ ಗೌಡ ಪ್ರಜ್ವಲ್ ಸ್ವಾಗತಿಸಿದರು. ಕೆ.ಎಂ. ಶ್ರೀನಾಥ್ ನಡ ವಂದಿಸಿದರು. ವಾಣಿ ಶಿಕ್ಷಣ ಸಂಸ್ಥೆಯ ಶಿಕ್ಷಕಿಯರು ಪ್ರಾರ್ಥಿಸಿದರು.((ಕೋಟ್))ನಿವೃತ್ತ ಸೈನಿಕರಾದ ಅಶೋಕ್, ದೇವಪ್ರಸಾದ್ ಗೌಡ, ಮೋಹನ್ ಗೌಡ, ಸಮಾಜ ಸೇವಕಿ ಲೋಕೇಶ್ವರಿ ವಿನಯಚಂದ್ರ, ಡಾ. ಪ್ರಜ್ಞಾ ಕೃಷ್ಣಕುಮಾರ್, ಡಾ. ಆದರ್ಶ ಎ.ಎಲ್., ಡಾ. ಅಭಿಜ್ಞಾ, ಡಾ. ರಿತಿಕಾ ಹಾಗೂ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಬಳಿಕ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಹಾಗೂ ಕ್ರೀಡಾ, ಸಾಂಸ್ಕೃತಿಕ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.

ಕಲ್ಯಾಣಮಂಟಪ- ವಿದ್ಯಾಸಂಸ್ಥೆ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಶಿಲಾನ್ಯಾಸಗೊಂಡಿದ್ದ ಈ ಜಾಗದಲ್ಲಿ ಅಗತ್ಯಕ್ಕೆ ಅನುಗುಣವಾಗಿ ೪೩ ವರ್ಷಗಳ ಹಿಂದೆ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದೆವು. ಇಂದು ವಾಣಿ ವಿದ್ಯಾಸಂಸ್ಥೆ ಗುಣಮಟ್ಟದ ಶಿಕ್ಷಣದ ಮೂಲಕ ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದಿದೆ. ಎಸ್ಸೆಸ್ಸೆಲ್ಸಿಯಲ್ಲಿ ಸತತ ಶೇ. ೧೦೦ರಷ್ಟು ಫಲಿತಾಂಶ ಹಾಗೂ ಪಿಯುಸಿಯಲ್ಲಿ ಹಲವು ರ‍್ಯಾಂಕ್‌ಗಳ ದಾಖಲೆ ನಿರ್ಮಾಣವಾಗುತ್ತಿದೆ. ನಮ್ಮ ಸಮಾಜ ಶೈಕ್ಷಣಿಕವಾಗಿ ಮುಂದುವರಿದಿದ್ದು, ಗೌಡ ಸಮಾಜವನ್ನು ಗುರುತಿಸುವ ಹೆಮ್ಮೆಯ ವಿದ್ಯಾಸಂಸ್ಥೆಯಾಗಿ ವಾಣಿ ವಿದ್ಯಾಸಂಸ್ಥೆ ಬೆಳೆದಿದೆ.ಹೆಚ್. ಪದ್ಮ ಗೌಡಗೌರವಾಧ್ಯಕ್ಷರು, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ಬೆಳ್ತಂಗಡಿ((ಬಾಕ್ಸ್))ವಾಣಿ ಶಿಕ್ಷಣ ಸಂಸ್ಥೆಯ ಮೂಲಕ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯಬೇಕು. ಜೊತೆಗೆ ನಮ್ಮ ಸಂಘವೂ ಬೆಳೆಯಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹಾಸ್ಟೆಲ್ ಸೌಲಭ್ಯ ಪ್ರಾರಂಭವಾಗುತ್ತದೆ. ನಮ್ಮ ಶಾಲೆ ಇನ್ನಷ್ಟು ಎತ್ತರಕ್ಕೆ ಏರಬೇಕಾದರೆ ಸ್ವಜಾತಿಯ ವಿದ್ಯಾರ್ಥಿಗಳು ಇಲ್ಲಿಗೆ ಸೇರಬೇಕು. ಪ್ರಧಾನ ಭಾಷಣಗಾರರು ವಿದ್ಯಾರ್ಥಿಗಳಿಗೆ ಅರ್ಥಗರ್ಭಿತ ಮಾಹಿತಿಯನ್ನು ನೀಡಿದ್ದಾರೆ.

ನವೆಂಬರ್‌ನಲ್ಲಿ ನಡೆಯುವ ಯುವ ವೇದಿಕೆಯ ‘ಗೌಡೆರೆ ಗೌಜಿ ಗಮ್ಮತ್ತ್’ ಕಾರ್ಯಕ್ರಮಕ್ಕೆ ನಮ್ಮೆಲ್ಲರ ಸಹಕಾರವಿರಲಿ.ಪಿ. ಕುಶಾಲಪ್ಪ ಗೌಡಅಧ್ಯಕ್ಷರು, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ಬೆಳ್ತಂಗಡಿ

LEAVE A REPLY

Please enter your comment!
Please enter your name here