₹10 ಡಾಕ್ಟರ್ ಕ್ಲಿನಿಕ್ ಸ್ಥಳಾಂತರ!ಇಂದು ಹಳೆಯ ಕ್ಲಿನಿಕ್‌ಗೆ ಕೊನೆಯ ದಿನ; ನಾಳೆಯಿಂದ ಹೊಸ ಕಟ್ಟಡದಲ್ಲಿ ಸೇವೆ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ಡಾ. ವೇಣುಗೋಪಾಲ್ ಶರ್ಮಾ ಅವರ ಚಿಕಿತ್ಸಾ ಕ್ಲಿನಿಕ್ ಸ್ಥಳಾಂತರ!

0

ಗುರುವಾಯನಕೆರೆ: ಗುರುವಾಯನಕೆರೆಯಲ್ಲಿ ಜನಪ್ರಿಯವಾಗಿರುವ ಡಾ. ವೇಣುಗೋಪಾಲ್ ಶರ್ಮಾ ಅವರ ಚಿಕಿತ್ಸಾ ಕ್ಲಿನಿಕ್ ಸ್ಥಳಾಂತರಗೊಳ್ಳುತ್ತಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ಹಳೆಯ ಕಟ್ಟಡ ತೆರವುಗೊಳ್ಳಲಿರುವುದರಿಂದ, ಕ್ಲಿನಿಕ್ ಅನ್ನು ಹಳೆಯ ಕಟ್ಟಡದ ಹಿಂಭಾಗದಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಇಂದು ಹಳೆಯ ಕ್ಲಿನಿಕ್‌ನಲ್ಲಿ ಕೊನೆಯ ದಿನದ ಸೇವೆ ನಡೆಯಲಿದ್ದು, ನಾಳೆಯಿಂದ ಹೊಸ ಕಟ್ಟಡದಲ್ಲಿ ಚಿಕಿತ್ಸಾ ಕ್ಲಿನಿಕ್‌ನ ಚಿಕಿತ್ಸಾ ಸೇವೆಗಳು ಆರಂಭವಾಗಲಿವೆ. ಕಡಿಮೆ ಶುಲ್ಕದಲ್ಲಿ ಚಿಕಿತ್ಸೆ ನೀಡುವ ಮೂಲಕ ಜನರ ವಿಶ್ವಾಸ ಗಳಿಸಿರುವ ಡಾ. ವೇಣುಗೋಪಾಲ್ ಶರ್ಮಾ ಅವರ ಸೇವೆ ಹೊಸ ಕಟ್ಟಡದಲ್ಲಿಯೂ ಮುಂದುವರಿಯಲಿದೆ.

ಹೀಗಾಗಿ, ಚಿಕಿತ್ಸೆಗಾಗಿ ಬರುವ ಸಾರ್ವಜನಿಕರು ನಾಳೆಯಿಂದ ಹೊಸ ಕಟ್ಟಡಕ್ಕೆ ಭೇಟಿ ನೀಡಿ ವೈದ್ಯರನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here