ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬೃಹತ್ ಸೀರೆ ಮೇಳಕ್ಕೆ ಚಾಲನೆ

0

ಅಕ್ಟೋಬರ್ 16ರಿಂದ 21ರವರೆಗೆ ಆಯ್ದ ಸೀರೆಗಳ ಮೇಲೆ ಶೇ. 10ರಿಂದ 50ರವರೆಗೆ ವಿಶೇಷ ರಿಯಾಯಿತಿಧರ್ಮಸ್ಥಳ, ಅ. 16: ಶ್ರೀ ಕ್ಷೇತ್ರ ಧರ್ಮಸ್ಥಳದ ಕಲ್ಲೇರಿಯ ಉನ್ನತಿ ಕಟ್ಟಡದಲ್ಲಿರುವ ಸುನಿಲ್ ಸಿಲ್ಕ್ಸ್ ಸಾರೀಸ್ ಮಳಿಗೆಯಲ್ಲಿ ಆಯೋಜಿಸಲಾಗಿರುವ ಬೃಹತ್ ಸೀರೆ ಮೇಳಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಶ್ರೀ ಎ.ವಿ. ಶೆಟ್ಟಿ ಹಾಗೂ ಉದ್ಯಮಿ ಸುಜಾತ ಆರಿಗ ಅವರು ಚಾಲನೆ ನೀಡಿದರು.

ಅಕ್ಟೋಬರ್ 16ರಿಂದ 21ರವರೆಗೆ ನಡೆಯಲಿರುವ ಈ ವಿಶೇಷ ಸೀರೆ ಮೇಳದಲ್ಲಿ ಗ್ರಾಹಕರಿಗಾಗಿ ವೈವಿಧ್ಯಮಯ ವಿನ್ಯಾಸದ ಆಕರ್ಷಕ ಸೀರೆಗಳ ಸಂಗ್ರಹವನ್ನು ಒದಗಿಸಲಾಗಿದ್ದು, ಆಯ್ದ ಸೀರೆಗಳ ಮೇಲೆ ಶೇ. 10ರಿಂದ 50ರವರೆಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ.ಮಹಿಳೆಯರ ಅಭಿರುಚಿ ಹಾಗೂ ಅಗತ್ಯಗಳಿಗೆ ಅನುಗುಣವಾಗಿ ಸೀರೆಗಳ ವಿಶಿಷ್ಟ ಸಂಗ್ರಹವನ್ನು ಹೊಂದಿರುವ ಈ ಮಳಿಗೆಯಲ್ಲಿ ಕಲಂಕಾರಿ, ಮಹೇಶ್ವರಿ ಸಿಲ್ಕ್ ಕಾಟನ್, ಇಳಕಲ್, ಧಾರವಾಡ ಕಸೂತಿ, ಮಸರಾಯಿ ಕಾಟನ್, ಸೆಮಿ ಮೈಸೂರು ಸಿಲ್ಕ್ ಕ್ರೇಪ್, ಮಂಗಳಗಿರಿ, ಜಪಾನ್ ಕ್ರೇಪ್, ಡೋಲಾ ಸಿಲ್ಕ್, ಮಲ್‌ಮಲ್ ಸಿಲ್ಕ್, ಜೂಟ್ ಕಾಟನ್, ವಾಯಿಲ್, ಫ್ಯಾನ್ಸಿ ಹಾಗೂ ಯೂನಿಫಾರಂ ಸೀರೆಗಳು ಸೇರಿದಂತೆ ಹಲವು ಬಗೆಯ ಸೀರೆಗಳು ಲಭ್ಯವಿವೆ.

ಇದರೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ನೂತನ ವಿನ್ಯಾಸದ ಟ್ರೆಂಡಿ ಸೀರೆಗಳೂ ಗ್ರಾಹಕರ ಗಮನ ಸೆಳೆಯುತ್ತಿವೆ.ಸಾಂಪ್ರದಾಯಿಕ ಸೊಬಗು ಹಾಗೂ ಆಧುನಿಕ ವಿನ್ಯಾಸಗಳ ಸಮ್ಮಿಲನದೊಂದಿಗೆ ಆಯೋಜಿಸಿರುವ ಈ ಸೀರೆ ಮೇಳವು ಮಹಿಳೆಯರಿಗೆ ತಮ್ಮ ಇಷ್ಟದ ಸೀರೆಗಳನ್ನು ವಿಶೇಷ ರಿಯಾಯಿತಿಯಲ್ಲಿ ಖರೀದಿಸಲು ಉತ್ತಮ ಅವಕಾಶ ಕಲ್ಪಿಸಿದೆ.

ಈ ಸಂದರ್ಭದಲ್ಲಿ ಸುನಿಲ್ ಸಿಲ್ಕ್ಸ್ ಸಾರೀಸ್ ಮಳಿಗೆಯ ಮಾಲಕಿ ಪವಿತ್ರ ಸುನಿಲ್ ಅವರು ಆಗಮಿಸಿದ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು.ಮಳಿಗೆಯ ವಿಳಾಸ: ಸುನಿಲ್ ಸಿಲ್ಕ್ಸ್ ಸಾರೀಸ್, ಕೊಠಡಿ ಸಂಖ್ಯೆ 9, ಉನ್ನತಿ ಕಟ್ಟಡ, ಕಲ್ಲೇರಿ, ಧರ್ಮಸ್ಥಳ – 574216.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7899856284.

LEAVE A REPLY

Please enter your comment!
Please enter your name here