






ಬೆಳ್ತಂಗಡಿ: ಕೊರಿಂಜದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಭಜನೋತ್ಸವ ವೈಭವದಿಂದ ನೆರವೇರಿತು.


ಕೊರಿಂಜ ಪಂಚಲಿಂಗೇಶ್ವರ, ಕಾರಿಂಜ ವಿಘ್ನೇಶ್ವರ, ಪಿಲಿಗೂಡು ಚಾಮುಂಡೇಶ್ವರಿ ಮತ್ತು ಮಲೆಂಗಲ್ಲು ಉಮಾಮಹೇಶ್ವರ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಿತು. ಭಜನಾ ತಂಡಗಳ ಭಕ್ತಿ ಗೀತೆಗಳಿಗೆ ಭಕ್ತರು ಮನಸೋತರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ, ಆಡಳಿತ ಮಂಡಳಿ ಮತ್ತು ನವರಾತ್ರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.









