ತೋಟತ್ತಾಡಿ: 10ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ ಕಾರ್ಯಕ್ರಮ

0

ಧರ್ಮರಕ್ಷಾ ವೇದಿಕೆ, ತೋಟತ್ತಾಡಿ ಇದರ ಆಶ್ರಯದಲ್ಲಿ 10 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ ಕಾರ್ಯಕ್ರಮವು ತೋಟತ್ತಾಡಿ ಬೆಂದ್ರಾಳ ಶ್ರೀ ನಾರಾಯಣ ಧರ್ಮಪರಿಪರಿಣಾ ಯೋಗಂ (ಎಸ್ ಎನ್ ಡಿ ಪಿ) ಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ, ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸವನ್ನು ಸಾಮಾಜಿಕ ಕಾರ್ಯಕರ್ತೆ ಹಾಗೂ ಪ್ರಖರ ವಾಗ್ಮಿ ರಮಿತಾ ಸೂರ್ಯವಂಶಿ ನೀಡಲಿದ್ದಾರೆ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಶ್ರೀ ನವೀನ್ ನೆರಿಯ,ದ.ಕ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ನಮಿತಾ,ಎಸ್.ಎನ್.ಡಿ ಪಿ ಶಾಖೆ ತೋಟತ್ತಾಡಿ ಇದರ ಅಧ್ಯಕ್ಷರಾದ ಶ್ರೀ ಸುರೇಶ್ ಪರ್ಲ, ಕಾರ್ಯಕ್ರಮದ ಅಧ್ಯಕ್ಷತೆಯನ್ನು,ಧರ್ಮರಕ್ಷಾ ವೇದಿಕೆ ತೋಟತ್ತಾಡಿ ಇದರ ಅಧ್ಯಕ್ಷರಾದ ಶ್ರೀ ಪ್ರಸಾದ್ ಮಡಿಯೂರು ಇವರು ವಹಿಸಲಿದ್ದಾರೆ.ಬೆಳಿಗ್ಗೆ ಗಂಟೆ 8 ರಿಂದ ಗಣಹೋಮ ಹಾಗೂ ಶ್ರೀ ಶಾರದಾ ದೇವಿಯ ಮೂರ್ತಿ ಪ್ರತಿಷ್ಠೆ, ಆಹ್ವಾನಿತ ಭಜನಾ ಮಂಡಳಿಗಳಿಂದ ಭಜನೆ, ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ ಶ್ರೀ ಶಾರದಾ ದೇವಿ ಮೂರ್ತಿಯ ವೈಭವಯುತ ಶೋಭಾಯಾತ್ರೆ ನಂತರ ಬೆಂದ್ರಾಳ ನದಿಯಲ್ಲಿ ಶ್ರೀ ಶಾರದಾ ದೇವಿ ಮೂರ್ತಿಯ ಜಲಸ್ತಂಭನ ನಡೆಯಲಿದೆ.

LEAVE A REPLY

Please enter your comment!
Please enter your name here