






ಬೆಳ್ತಂಗಡಿ: 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ಅಕ್ಟೋಬರ್ 16 ರಂದು ಅಂತಿಮ ದಿನಾಂಕವಾಗಿದ್ದು, ರೈತರು ತಮ್ಮ ಜಮೀನಿನ ಬೆಳೆ ಸಮೀಕ್ಷೆ ವಿವರವನ್ನು ಬೆಳೆ ದರ್ಶಕ ಮೊಬೈಲ್ ಆ್ಯಪ್ ಮೂಲಕ ಪರಿಶೀಲಿಸಿ ಖಚಿತಪಡಿಸಿಕೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ರೈತರು ತಮ್ಮ ಆಂಡ್ರಾಯ್ಡ್ ಮೊಬೈಲ್ನ ಗೂಗಲ್ ಪ್ಲೇ ಸ್ಟೋರ್ನಿಂದ “Bele Darshak” ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಲಿಂಕ್: *https://play.google.com/store/apps/details?id=com.crop.offcskharif_2021*ಈ ಆ್ಯಪ್ನಲ್ಲಿ ರೈತರು ತಮ್ಮ ಎಲ್ಲಾ ಸರ್ವೆ ನಂಬರ್ಗಳಲ್ಲಿ ದಾಖಲಾಗಿರುವ ಬೆಳೆ ವಿವರವನ್ನು ಫೋಟೋ ಸಹಿತ ವೀಕ್ಷಿಸಬಹುದು.


ಒಂದು ವೇಳೆ ಸಮೀಕ್ಷೆಯಲ್ಲಿ ತಪ್ಪುಗಳಿದ್ದರೆ, ಆ್ಯಪ್ ಮೂಲಕವೇ ಆಕ್ಷೇಪಣೆ ಸಲ್ಲಿಸಬಹುದು ಅಥವಾ ತಹಶೀಲ್ದಾರ್ ಕಚೇರಿಗೆ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಬಹುದು.ಈಗಾಗಲೇ ಬೆಳ್ತಂಗಡಿ ತಾಲೂಕನ್ನು ಸಾಧಾರಣ ಬರಪೀಡಿತ ತಾಲೂಕು ಎಂದು ಸರ್ಕಾರ ಘೋಷಿಸಿದ್ದು, ಭತ್ತ ಬೆಳೆದ ಎಲ್ಲಾ ರೈತರು ಸರ್ಕಾರದ ಪರಿಹಾರ ಮೊತ್ತ ಪಡೆಯಲು ಬೆಳೆ ಸಮೀಕ್ಷೆಯ ಅಂಕಿ-ಅಂಶ ಕಡ್ಡಾಯವಾಗಿದೆ.
ಆದ್ದರಿಂದ ರೈತರು ತಪ್ಪದೆ ತಮ್ಮ ಗ್ರಾಮಕ್ಕೆ ನೇಮಿಸಲಾದ ಖಾಸಗಿ ನಿವಾಸಿಗಳನ್ನು (Private Surveyors) ಸಂಪರ್ಕಿಸಿ ಬೆಳೆ ಸಮೀಕ್ಷೆ ಮಾಡಿಸಿಕೊಳ್ಳಬೇಕೆಂದು ಕೋರಲಾಗಿದೆ.









