






ಅ14, ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್ ನ ಉರೂಸ್ ಕಾರ್ಯಕ್ರಮವು 2026 ನೇ ಡಿಸೆಂಬರ್ 12 ರಂದು ನಡೆಸುವುದೆಂದು ಪರಪ್ಪು ಮೊಹಲ್ಲಾ ಖಾಝಿಯಾದ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಮರ್ಕಝ್ ನಲ್ಲಿ ಘೋಷಣೆ ಮಾಡಿದ್ದಾರೆ.


ಆ ಪ್ರಯುಕ್ತ ಡಿಸೆಂಬರ್ 08 ರಿಂದ 12 ರವರೆಗೆ ಕಾರ್ಯಕ್ರಮ ನಡೆಯಲಿದೆ.ಅ 14 ರಂದು ಎ ಪಿ ಉಸ್ತಾದ್ ರವರನ್ನು ಆಡಳಿತ ಸಮಿತಿಯ ಅಧ್ಯಕ್ಷರಾದ ಹಾಫಿಳ್ ಮಹಮ್ಮದ್ ಹನೀಫ್ ಮಿಸ್ಬಾಹಿ,ಉಪಾದ್ಯಕ್ಷರಾದ ಕುಂಞ ಅಬ್ದುಲ್ಲ ದಾರಿಮಿ, ಜೊತೆ ಕಾರ್ಯದರ್ಶಿಯಾದ ಮಹಮ್ಮದ್ ಶರೀಫ್ ಜಿ, ಸದಸ್ಯರುಗಳಾದ ಅಬ್ದುಲ್ ಕರೀಮ್ ಗೇರುಕಟ್ಟೆ, ಮಹಮ್ಮದ್.ಎನ್.ಎನ್. ಬೇಟಿಯಾಗಿದ್ದರು.









