






ಸಹಕಾರ ರಂಗದಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆವಿಶಿಷ್ಟ ರೀತಿಯ ಸೇವೆ ನೀಡುತ್ತಿರುವ ಬಂಗಾಡಿ ಸಹಕಾರಿವ್ಯವಸಾಯಿಕ ಸಂಘವು ರಾಜ್ಯಕ್ಕೆ ಮಾದರಿ ಸಹಕಾರಿಸಂಘವಾಗಿದ್ದು,ಇದರ ಕಾರ್ಯಚಟುವಟಿಕೆಗಳಅಧ್ಯಯನ ನಡೆಸಲು ಕೇರಳ ರಾಜ್ಯದ ಕೃಷಿ ಸಹಕಾರಿಸಂಘಗಳ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಪ್ರತಿನಿಧಿಗಳ ತಂಡದ 45 ಮಂದಿ ಅಕ್ಟೋಬರ್ 8 ಗುರುವಾರದಂದು ಸಂಘದಕಿಲ್ಲೂರು ಹಾಗೂ ಕಡಿರುದ್ಯಾವರ ಶಾಖೆಗೆ ಬೇಟಿ ನೀಡಿತು.
ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಅತೀ ಹೆಚ್ಚುನವೋದಯ ಸ್ವ-ಸಹಾಯ ಗುಂಪುಗಳುಕಾರ್ಯನಿರ್ವಹಣೆ ಮಾಡುತ್ತಿದ್ದು,ಸಂಘದ ಮೂಲಕ ಸ್ವ-ಸಹಾಯ ಗುಂಪುಗಳಿಗೆ ಸ್ವ-ಉದ್ಯೋಗಕ್ಕೆ ಸಾಲವನ್ನುನೀಡಲಾಗುತ್ತಿದೆ.
ವನಶ್ರೀ ನವೋದಯ ಸ್ವ-ಸಹಾಯಗುಂಪು ಕೋಡಿ ಇದರ ಸದಸ್ಯರು ಸ್ವ- ಉದ್ಯೋಗಕ್ಕೆ ಸಾಲಪಡೆದು ಡ್ರಾಗನ್ ಪ್ರೂಟ್ ಮಾಡಿರುವ ಮಾದರಿ ರೈತರುಸಂಘದ ಸದಸ್ಯರಾದ ಮಿತ್ತಬಾಗಿಲು ಗ್ರಾಮದ ಶ್ರೀರವಿಚಂದ್ರ ಗೌಡ ಇವರ ತೋಟವನ್ನು ಅದ್ಯಯನತಂಡವು ವೀಕ್ಷಣೆ ಮಾಡಿ ಮೆಚ್ಚುಗೆಯನ್ನುವ್ಯಕ್ತಪಡಿಸಿದರು.ಶ್ರೀ ರಾಮ ನವೋದಯ ಕುಕ್ಕುದಡಿ ಕಡಿರುದ್ಯಾವರಇದರ ಸದಸ್ಯರಾದ ಶ್ರೀ ಪ್ರಶಾಂತ್ ಗೌಡ ಹಾಗೂ ಸಂತೋಷ್ ಗೌಡ ಇವರು ಗುಂಪಿನ ಮೂಲಕ ಸಾಲ ಪಡೆದುಶಾಮಿಯಾನದ ಉದ್ಯಮವನ್ನು ನಡೆಸುತ್ತಿರುವ ಕುರಿತಂತೆ ಉಪಯುಕ್ತ ಮಾಹಿತಿಯನ್ನು ತಂಡವುಪಡೆಯಿತು.ಹಾಗೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೀರ್ತಿ ನವೋದಯ ಗುಂಪುಕೊಂದೊಡಿ, ಶ್ರೀ ಗುರು ನವೋದಯ ಗುಂಪುಕಿನ್ಯಡ್ಕ,ಶ್ರೀ ರಾಮ ನವೋದಯ ಕುಕ್ಕುದಡಿ, ನವರತ್ನ ನವೋದಯ ಸ್ವ-ಸಹಾಯ ಗುಂಪು ಗುಂಡಿರು ಇದರಗುಂಪಿನ ಸದಸ್ಯರೊಂದಿಗೆ ಸಂವಾದ ನಡೆಸಿ, ಗುಂಪಿನ ಕಾರ್ಯನಿರ್ವಹಣೆ ಮತ್ತು ಸಾಲ ವಿತರಣೆಯ ಬಗ್ಗೆನವೋದಯ ಸ್ವ-ಸಹಾಯ ಗುಂಪಿನ ಮೇಲ್ವೀಚಾರಕಾರದಶ್ರೀಮತಿ ಸುಮಿತ್ರ ಇವರಿಂದ ಮಾಹಿತಿಯನ್ನು ಪಡೆಯಿತು.ಸ್ವ-ಉದ್ಯೋಗದ ಮೂಲಕ ಮಾದರಿಯಾಗಿ, 10,000ಕೋಳಿ ಸಾಕಾಣಿಕೆ ಮಾಡುತ್ತಿರುವ ಇಂದಬೆಟ್ಟು ಗ್ರಾಮದ ಪರಾರಿ ಪ್ರಕಾಶ್ ಇವರ ಉದ್ಯಮವನ್ನು ಕೇರಳದಕೃಷಿ ಸಹಕಾರಿ ಸಂಘಗಳ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರತಿನಿಧಿಗಳ ತಂಡವುಬೇಟಿ ನೀಡಿ ವಿಶೇಷ ಅನುಭವನ್ನು ಪಡಕೊಂಡಿತ್ತು.


ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು 1250 ಕೋಟಿವ್ಯವಹಾರವನ್ನು ನಡೆಸಿ, 6402 ಸದಸ್ಯರನ್ನು ಹೊಂದಿ,ರೂ210 ಕೋಟಿಗೂ ಮಿಕ್ಕಿ ಸಾಲ ನೀಡಲಾಗಿದ್ದು, ಇದರಲ್ಲಿ ೪೪ಕೋಟಿಗೂ ಮಿಕ್ಕಿ ಬೆಳೆ ಸಾಲಗಳನ್ನುವಿತರಿಸಲಾಗಿದೆ. ಸಂಘವು 2025-26 ಸಾಲಿನಲ್ಲಿ 5 ಕೋಟಿ ಮಿಕ್ಕಿನಿವ್ವಳ ಲಾಭ ಗಳಿಸಿದೆ.ಸಂಘವು ಪೂರ್ಣ ಪ್ರಮಾಣದ ಎಂಟುಶಾಖೆಗಳನ್ನು ಹೊಂದಿದ್ದು,ಪತ್ತು ಮತ್ತು ಪತ್ತೇತರವ್ಯವಹಾರಗಳನ್ನು ನಡೆಸುತ್ತಿದೆ.
ಈ ಎಲ್ಲಾ ವ್ಯವಹಾರಗಳಯಶಸ್ವಿ ಅನುಷ್ಟಾನದಿಂದ ನಬಾರ್ಡಿನ ಗಮನಸೆಳೆದಿದೆ.ಸಂಘದ ವ್ಯವಹಾರ ಹಾಗೂ ಅಭಿವೃದ್ದಿಯನ್ನು ಹೊಂದಿರುವ ಕುರಿತಂತೆ ಸಂಘದ ಅದ್ಯಕ್ಷರು ಮಾಹಿತಿಯನ್ನು ಅದ್ಯಯನ ತಂಡದೊಂದಿಗೆಹಂಚಿಕೊಂಡರು.
ಈ ಸಂದರ್ಬದಲ್ಲಿ ಬರ್ಡ್ ಸಂಸ್ಥೆಯ ಡಿ.ಜಿ.ಎಂ ಪ್ರೀತಿ ತೋಮಸ್,ಸತೀಶ್ ಹಾಗೂ ಉಪಾಧ್ಯಕ್ಷ ಆನಂದಗೌಡ. ನಿರ್ದೇಶಕರಾದ ಸಂಘದಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿಗಾರ್,ನವೋದಯ ಸ್ವ-ಸಹಾಯ ಗುಂಪುಗಳ ಮೇಲ್ವೀಚಾರಕಾರದ ಶ್ರೀಮತಿ ಸುಮಿತ್ರ, ಸಂಘದಸಿಬ್ಬ೦ದಿಗಳು ಉಪಸ್ಥಿತರಿದ್ದರು.









