ನೆರಿಯ ಕುಡಿಯುವ ನೀರಿನ ಸಮಸ್ಯೆ ಸಂಜೆ ಒಳಗೆ ನೀರು ಬಿಡುವ ಭರವಸೆಯನ್ನು ಕೊಟ್ಟ ಗ್ರಾಮ ಪಂಚಾಯತ್ ಸಂಜೆಯೊಳಗೆ ನೀರು ಬರೆದಿದ್ದರೆ ಮತ್ತೆ ಪ್ರತಿಭಟನೆ ಗ್ರಾಮಸ್ಥರು

0

ನೆರಿಯ ಗ್ರಾಮ ಪಂಚಾಯತ್ ಮುತ್ತಿಗೆ ಹಾಕಿದ ಹಿನ್ನೆಲೆಯಲ್ಲಿ ಸಂಜೆಯೊಳಗೆ ನೀರು ಬಿಡುವ ಭರವಸೆಯನ್ನು ಗ್ರಾಮ ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ಭರವಸೆಯನ್ನು ನೀಡಿರುತ್ತಾರೆ.

ಪಾದೆಗುಡ್ಡೆ ಪ್ರದೇಶಕ್ಕೆ ಸಂಜೆ ನಾಲ್ಕು ಗಂಟೆ ಒಳಗೆ ನೀರು ಬಿಡುವ ಕೆಲಸ ಮಾಡುತ್ತೇವೆ ಹಾಗೂ ಪರಂದಾಡಿ ಪ್ರದೇಶಕ್ಕೆ 15 ದಿನದ ಒಳಗಡೆ ನೀರಿನ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಸಂಜೆ ಒಳಗಡೆ ನೀರು ಬರದಿದ್ದರೆ ಮತ್ತೆ ಪಂಚಾಯಿತಿನ ಮುಂದೆ ಧರಣಿ ಮಾಡುತ್ತೇವೆ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ನೀರಿನ ಟ್ಯಾಂಕ್ ಒಳಗೆ ತುಂಬಿದ ಕೆಸರು

ಗ್ರಾಮದ ಪಾದೆಗುಡ್ಡೆ ಎಂಬಲ್ಲಿ ನೀರಿನ ಟ್ಯಾಂಕಿ ಒಳಗೆ ಪ್ರಮಾಣದ ಮಣ್ಣು ಕೆಸರು ತುಂಬಿಕೊಂಡಿದೆ ಇದರ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಕೆಸರುಮಯವಾದ ಈ ನೀರನ್ನು ಕುಡಿದು ಆರೋಗ್ಯದಲ್ಲಿ ಏರುಪೇರು ಆದರೆ ನೇರವಾಗಿ ಪಂಚಾಯತ್ ಆಡಳಿತ ಮಂಡಳಿ ಹೊನೆ ಇಂದು ಸಂಜೆಯೊಳಗೆ ನೀರು ಬಿಡದಿದ್ದರೆ ಮತ್ತೆ ಪಂಚಾಯಿತಿನ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಭಟನೆಗಾರರು ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here