






ತೋಟತ್ತಾಡಿ: ಇತಿಹಾಸ ಪ್ರಸಿದ್ಧ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನವರಾತ್ರಿಯ ಪ್ರಥಮ ದಿನದಂದು ತೆನೆ ತರುವ ಕಾರ್ಯಕ್ರಮವು ಭಕ್ತಾದಿಗಳ ಅಪಾರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಮತ್ತು ಧಾರ್ಮಿಕ ಶ್ರದ್ಧಾಭಕ್ತಿಯಿಂದ ನೆರವೇರಿತು.


ದೇವಸ್ಥಾನದ ಪ್ರಧಾನ ಅರ್ಚಕರಾದ ದಿವಾಕರ್ ಭಟ್ ಅವರು ಧಾರ್ಮಿಕ ವಿಧಿ-ವಿಧಾನಗಳು ಹಾಗೂ ಪೂಜಾ ಕಾರ್ಯಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು.
ಈ ಧಾರ್ಮಿಕ ಸಡಗರದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಸನತ್ ಕುಮಾರ್ ಮೂರ್ಜೆ, ದಿನೇಶ್ ನಾಯ್ಕ ಕೋಟೆ, ವಿಜಯ ಗೌಡ ಅಗರಿ, ಭಜನಾ ಮಂಡಳಿ ಅಧ್ಯಕ್ಷರಾದ ಕುಶಾಲಪ್ಪ ಗೌಡ ಅಗರಿ, ಕಾರ್ಯದರ್ಶಿ ಸತೀಶ್ ಮೂರ್ಜೆ ಹಾಗೂ ದೇವಸ್ಥಾನದ ಪ್ರಮುಖ ಪದಾಧಿಕಾರಿಗಳಾದ ಸುಮತಿ ಬರಮೇಲು, ಹೇಮಂತ್ ಕುಲಾಲ್ ಕಜೆ, ಲೋಕಯ್ಯ ಪೂಜಾರಿ ಬರಮೇಲು, ಜಯಂತ್ ಗೌಡ ಪರಾರಿ, ಶಶಿಧರ ಗೌಡ ಪಿತ್ತಿಲು, ಶಾರದಾ ಪಿತ್ತಿಲು ಸೇರಿದಂತೆ ಊರಿನ ಸಮಸ್ತ ಭಕ್ತಾದಿಗಳು ಉಪಸ್ಥಿತರಿದ್ದು ದೇವರ ಕೃಪೆಗೆ ಪಾತ್ರರಾದರು.









