






ಲಾಯಿಲ: ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಹಾಗೂ ಶ್ರೀ ಚಂಡಿಕಾಹವನ ಅ.11 ರಿಂದ 20ವರೆಗೆ ನಡೆಯಲಿದೆ. ಅ.11ರಂದು ಬೆಳಿಗ್ಗೆ 11ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಹಾಗೂ ಸಂಜೆ 7 ರಿಂದ ಭಜನಾ ಕಾರ್ಯಕ್ರಮ, ಅ.12ರಂದು ಬೆಳಿಗ್ಗೆ 11.30 ರಿಂದ ಭಜನಾ ಕಾರ್ಯಕ್ರಮ, ಸಂಜೆ 6 ರಿಂದ ಯಕ್ಷಜನ ಸಭಾ ಉಜಿರೆ ಇವರಿಂದ ಯಕ್ಷಗಾನ ತಾಳ ಮದ್ದಳೆ ಪ್ರಸಂಗ ಗಿರಿಜ ಕಲ್ಯಾಣ ನಡೆಯಲಿದೆ.


ಅ.13 ರಂದು ಬೆಳಿಗ್ಗೆ 10 ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಹಾಗೂ ಸಂಜೆ 6 ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರಗಲಿದೆ. ಅ.14 ರಂದು ಬೆಳಿಗ್ಗೆ 11-30 ರಿಂದ ಭಜನಾ ಕಾರ್ಯಕ್ರಮ, ರಾತ್ರಿ 7 ರಿಂದ ವಿದುಷಿ ವಿದ್ಯಾ ಮನೋಜ್ ಕಲಾನಿಕೇತನ ಡ್ಯಾನ್ಸ್ ಪೌಂಡೇಶನ್ ಕಲ್ಲಡ್ಕ ಇವರ ಶಿಷ್ಯಯರಿಂದ ಭರತನಾಟ್ಯ ಕಾರ್ಯಕ್ರಮ, ಅ.15 ರಂದು 11-30ರಿಂದ ಮೂಕಾಂಬಿಕ ಭಜನಾ ಮಂಡಳಿ ಉಜಿರೆ ಇವರಿಂದ ಭಜನಾ ಕಾರ್ಯಕ್ರಮ, ಸಂಜೆ 6-00 ರಿಂದ ಶ್ರೀ ಬನಶಂಕರಿ ಯಕ್ಷಕಲಾ ತಂಡ ಪಣೆಜಾಲು ಗುರುವಾಯನಕೆರೆ ಇವರಿಂದ ಯಕ್ಷಗಾನ ತಾಳಮದ್ದಳೆ ‘ಅಂಬಾ ಶಪಥ’ ನಡೆಯಲಿದೆ.
ಅ.16 ರಂದು ಬೆಳಿಗ್ಗೆ 11 ರಿಂದ ಭಜನಾ ಕಾರ್ಯಕ್ರಮ, ಬೆಳಿಗ್ಗೆ 11-30 ರಿಂದ ಹಾಗೂ ರಾತ್ರಿ 7-00 ರಿಂದ ಸ್ಯಾಕ್ರೋಫೋನ್ ವಾದನ ನಡೆಯಲಿದೆ. ಅ.17 ರಂದು ಬೆಳಿಗ್ಗೆ 11 ರಿಂದ ಭಗವದ್ಗೀತೆ ಪಠಣ, ಭಜನಾ ಕಾರ್ಯಕ್ರಮ, ರಾತ್ರಿ 7ರಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ಸಮೂಹನೃತ್ಯ ನಡೆಯಲಿದೆ. ಅ.18 ರಂದು ಬೆಳಿಗ್ಗೆ 11-00ರಿಂದ ಹಾಗೂ ರಾತ್ರಿ 7 ರಿಂದ ಭಜನಾ ಕಾರ್ಯಕ್ರಮ. ಅ.19 ರಂದು ಬೆಳಿಗ್ಗೆ 11-30 ರಿಂದ ಸ್ಯಾಕ್ರೋಫೋನ್ ವಾದನ, ರಾತ್ರಿ 8 ರಿಂದ ಊದುಪೂಜೆ, ಸಂಜೆ 6 ರಿಂದ ನಾಸಿಕ್ ಬ್ಯಾಂಡ್ ಪ್ರದರ್ಶನ. ಅ.20 ರಂದು ಬೆಳಿಗ್ಗೆ 11 ರಿಂದ ಭಜನಾ ಕಾರ್ಯಕ್ರಮ, ಸ್ಯಾಕ್ರೋಫೋನ್ ವಾದನ, ರಾತ್ರಿ 7 ರಿಂದ ಹುಲಿವೇಷ ಕಾರ್ಯಕ್ರಮ ನಡೆಯಲಿದೆ.ಅ.21 ರಂದು ಬೆಳಿಗ್ಗೆ 8 ರಿಂದ ಚಂಡಿಕಾ ಹೋಮ, ರಾತ್ರಿ 9 ರಿಂದ ಸ್ಯಾಕ್ರೋಫೋನ್ ವಾದನ, ಬೆಳಿಗ್ಗೆ 10 ರಿಂದ ಸ್ತೋತ್ರ ಪಠಣ ನಡೆಯಲಿದೆ ಎಂದು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಹಾಗೂ ಅನುವಂಶಿಕ ಆಡಳಿಯ ಮೊಕೇಸರ ಎನ್. ಧನಂಜಯ ಅಜ್ರ ನಡಗುತ್ತು ತಿಳಿಸಿದ್ದಾರೆ.









