






ಲೋಕನಾಡು: ಸತ್ಯನಾಪುರದ ಸತ್ಯದ ಸಿರಿಗಳ ಮೂಲ ಆಲಡೆ ಕ್ಷೇತ್ರ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ ನಡ್ವಾಲ್ ಇಲ್ಲಿ ಇದೇ ಬರುವ ನವೆಂಬರ್ 2ರಿಂದ 4ರವರೆಗೆ ನಡೆಯುವ ಶತರುದ್ರಾಭಿಷೇಕ, ಶ್ರೀ ರುದ್ರಯಾಗ, ಭಗವದ್ಗೀತಾ ಪಠಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಶ್ರೀ ಪಾಂಡುರಂಗ ಮರಾಟೆ ಹಡಿಲು, ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಗುರುರಾಜ ಗುರಿಪಳ್ಳ, ಸದಸ್ಯರಾದ ಯಶೋದರ ಗೌಡ ಕೊಡ್ಡೋಲು, ಹಿರಿಯರಾದ ಸಂಜೀವ ಕರ್ಕೇರ, ಅರ್ಚಕರಾದ ಮಾಧವ ಎಚ್, ಬೇಬಿ ಸಾಲಿಯಾನ್, ಜಗದೀಶ, ಆನಂದ ಎಸ್ ಡಿ, ಪ್ರಶಾಂತ್ ಹಾಗೂ ಭಗವದ್ ಭಕ್ತರು ಉಪಸ್ಥಿತರಿದ್ದರು.


ದೇವಸ್ಥಾನದಲ್ಲಿ ನಡೆಯುವ ಪರಿಹಾರ ಕಾರ್ಯಕ್ರಮಗಳ ಸಂದರ್ಭದಲ್ಲಿ ಮೂರು ದಿನ ನಿರಂತರ ಭಜನಾ ಕಾರ್ಯಕ್ರಮ, ನವೆಂಬರ್ 3ರಂದು ಸಂಜೆ 7:30 ರಿಂದ ಶ್ರದ್ಧಾ ಎನ್ ಭಟ್ ಪೈವಳಿಕೆ ಕಾಸರಗೋಡು ಇವರಿಂದ ಭಕ್ತ ಮಾರ್ಕಂಡೇಯ ಎಂಬ ಹರಿಕಥ ಕಾರ್ಯಕ್ರಮ ನಡೆಯಲಿದೆ. ನವೆಂಬರ್ 4ರಂದು ಬೆಳಿಗ್ಗೆ ಶತರುದ್ರಾಭಿಷೇಕ, ಶ್ರೀ ರುದ್ರಯಾಗ ಹಾಗೂ ಐಕ್ಯಮತ್ಯ ಹೋಮ ನಡೆದು ಮಾಣಿಲ ಶ್ರೀಧಾಮ ಮಹಾಲಕ್ಷ್ಮಿ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಯಾಗದ ಪೂರ್ಣಾಹುತಿ ನಡೆಯಲಿದೆ.
ಎಲ್ಲಾ ವೈದಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ಸಮಸ್ತ ಭಗವದ್ಭಕ್ತರನ್ನು ಪ್ರೀತಿಪೂರ್ವಕವಾಗಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ವ್ಯವಸ್ಥಾಪನ ಸಮಿತಿಯ ವತಿಯಿಂದ ಆತ್ಮೀಯವಾಗಿ ಸ್ವಾಗತಿಸುತ್ತೇವೆ.









