ದಿವ್ಯ ಜ್ಯೋತಿ ಶಾಲೆ ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳ ಸಿಯೋನ್ ಆಶ್ರಮ ಭೇಟಿ

0

ಕಾಯರ್ತಡ್ಕ: ದಿವ್ಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಗಂಡಿಬಾಗಿಲಿನ ಸಿಯೋನ್ ಆಶ್ರಮಕ್ಕೆ ಭೇಟಿ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಸ್ಕೌಟ್ ಅಂಡ್ ಗೈಡ್ಸ್ ಶಿಕ್ಷಕರೂ ಆಗಿರುವ ಮಹಿನ್ ಇವರ ನೇತೃತ್ವದಲ್ಲಿ, ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಲಿಸ್ನಾ ಮ್ಯಾಥ್ಯೂ, ಶಿಕ್ಷಕರಾದ ಸುರೇಶ್ ಶೆಟ್ಟಿ, ಪುಷ್ಪ ಬಿ , ತ್ರೇಸಿಯಾ ಹಾಗೂ ಶಾಲಾ ಸಿಬ್ಬಂದಿ ಮಂಜು ಹಾಗೂ 65 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಿಯಾನ್ ಆಶ್ರಮಕ್ಕೆ ಭೇಟಿ ನೀಡಿದರು.

ಆಶ್ರಮದ ಸಿಬ್ಬಂದಿಗಳು ನಗುಮೊಗದಿಂದ ಪಾನೀಯ ಹಾಗೂ ಸಿಹಿತಿಂಡಿ ಯೊಂದಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಆಶ್ರಮದ ಸಿಬ್ಬಂದಿಯವರಾದ ರಿತೇಶ್ ಆಶ್ರಮದ ಹುಟ್ಟು ಹಾಗೂ ಬೆಳವಣಿಗೆಯ ಕುರಿತು ಮಕ್ಕಳಿಗೆ ತಿಳಿಸಿದರು. ನಂತರ ವಿದ್ಯಾರ್ಥಿಗಳು ಆಶ್ರಮದ ಸದಸ್ಯರನ್ನು ವಿವಿಧ ಹಾಡು ಹಾಗೂ ನೃತ್ಯಗಳಿಂದ ರಂಜಿಸಿದರು. ಆಶ್ರಮದ ಸದಸ್ಯರು ಮಕ್ಕಳೊಂದಿಗೆ ಕುಣಿದು ಸಂತಸ ಪಟ್ಟರು. ಅನಂತರ ಸಿಬ್ಬಂದಿಯವರ ನೆರವಿನೊಂದಿಗೆ ಇಡೀ ಆಶ್ರಮದ ಒಳಗಡೆ ಸುತ್ತಾಡಿ ಅಲ್ಲಿನ ವಿವಿಧ ರೀತಿಯ ಸದಸ್ಯರೊಂದಿಗೆ ಮಾತನಾಡಿ , ಅಲ್ಲಿನ ಕಾರ್ಯ ಚಟುವಟಿಕೆಯ ಬಗ್ಗೆ ತಿಳಿದುಕೊಂಡರು.

ವಿದ್ಯಾರ್ಥಿಗಳು ತಾವು ತಂದಿದ್ದ ದಿನಸಿ ಸಾಮಗ್ರಿಗಳು, ತರಕಾರಿಗಳು, ದಿನಬಳಕೆಯ ವಸ್ತುಗಳನ್ನು ಆಶ್ರಮಕ್ಕೆ ಹಸ್ತಾಂತರಿಸಿದರು. ಒಟ್ಟಿನಲ್ಲಿ ಸ್ಕೌಟ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳು ಆಶ್ರಮದವರೊಂದಿಗೆ ಬೆರೆತು ವಿಶೇಷ ಅನುಭವಗಳೊಂದಿಗೆ ಹಿಂತಿರುಗಿದರು.

LEAVE A REPLY

Please enter your comment!
Please enter your name here