






ಉಪ್ಪಿನಂಗಡಿ: ಮಠ ನಿವಾಸಿ ಎಂ. ಇದಿನಬ್ಬ (94) ಅವರು ಅ. 5ರಂದು ನಿಧನ ಹೊಂದಿದರು.ಮುದ್ದಿಗೆಯಲ್ಲಿ 50 ವರ್ಷಗಳಿಂದ ಅಂಗಡಿ ವ್ಯಾಪಾರ ಹಾಗೂ ಬೀಡಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ಅವರು, ಧಾರ್ಮಿಕ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದರು.


ಉಪ್ಪಿನಂಗಡಿ ಸಮೀಪದ ಮಠದ ಬದ್ರಿಯಾ ಮಸೀದಿಯ ಅಧ್ಯಕ್ಷರಾಗಿ ಸತತ 30 ವರ್ಷ ಸೇವೆ ಸಲ್ಲಿಸಿದ್ದ ಅವರು, ಉಪ್ಪಿನಂಗಡಿ ಕೇಂದ್ರ ಮಸೀದಿಯ ಅಧ್ಯಕ್ಷರಾಗಿಯೂ ಹಾಗೂ ಕೊಕ್ಕಡ ಜುಮ್ಮಾ ಮಸೀದಿಯ ಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಮೃತರು ಪುತ್ರರಾದ ರಫೀಕ್ ಎಂ., ಅಬ್ದುಲ್ ರೆಹಮಾನ್ ಎಂ. ಹಾಗೂ ಪುತ್ರಿ ಆಯಿಷಾ ಎಂ. ಅವರನ್ನು ಅಗಲಿದ್ದಾರೆ.









