






ಗುರುವಾಯನಕೆರೆ: ಮಾತೃಶ್ರೀ ನವಶಕ್ತಿ ಕಾಶಿ ಬಾಬು ಶೆಟ್ಟಿ ಅವರ ಪ್ರಥಮ ಪುಣ್ಯಸ್ಮರಣೆಯ ಅಂಗವಾಗಿ ಅ.10ರಂದು ಗುರುವಾಯನಕೆರೆಯ ನವಶಕ್ತಿ ಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ವಿಷ್ಣು ಪುಣ್ಯಾರ್ಚನೆ, ವಿಷ್ಣು ಸಹಸ್ರನಾಮ ಹೋಮ, ಕಲಶ ಸಹಿತ ಹೋಮ, ದಾನ-ದಕ್ಷಿಣೆ, ಕೃಷ್ಣಾರ್ಪಣೆ ಹಾಗೂ ಕಾಶಿವನದ ಸ್ಥಳಶುದ್ಧಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.




ಮಾತೃಶ್ರೀ ಕಾಶಿ ಬಾಬು ಶೆಟ್ಟಿ ಅವರ ಸ್ಮರಣಾರ್ಥ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಗವಾನ್ ಶ್ರೀಮನ್ ನಾರಾಯಣನಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು. ದಿವಂಗತರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಕುಟುಂಬಕ್ಕೆ ದೇವರ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸಲಾಯಿತು.









