ವೇಣೂರು ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಫಾರಂ-7 ಹಾಕಿದ್ದಕ್ಕೆ ಸುಳ್ಳು ದೂರು – ಬಿಜೆಪಿ ಬಿಎಲ್‌ಎಯಿಂದ ಪೊಲೀಸರಿಗೆ ದೂರು

0

ವೇಣೂರು: ಪೆರಾಡಿ ಗ್ರಾಮದಲ್ಲಿ ಅಸ್ತಿತ್ವದಲ್ಲಿ ಇಲ್ಲದ ಮತದಾರರ ಬಗ್ಗೆ ಫಾರಂ-7ರಲ್ಲಿ ಆಕ್ಷೇಪಣೆ ಸಲ್ಲಿಸಿದ್ದ ತಮ್ಮ ಕಾರ್ಯಕರ್ತರ ವಿರುದ್ಧ ಎಸ್‌ಡಿಪಿಐ ಕಾರ್ಯಕರ್ತರು ಸುಳ್ಳು ದೂರು ನೀಡಿದ್ದಾರೆ ಎಂದು ಬೆಳ್ತಂಗಡಿ ಬಿಜೆಪಿ ಬಿಎಲ್‌ಎ-1 ಸೀತಾರಾಮ ಬಿ.ಎಸ್ ಅವರು ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ.ಫಾರಂ-7 ಎನ್ನುವುದು ಮತದಾರ ಆ ಭೂತಿನಲ್ಲಿ ವಾಸವಿಲ್ಲದಿದ್ದಾಗ, ಮರಣ ಹೊಂದಿದಾಗ ಆಕ್ಷೇಪಣೆ ಸಲ್ಲಿಸಲು ಚುನಾವಣಾ ಆಯೋಗವೇ ನೀಡಿರುವ ಅವಕಾಶವಾಗಿದೆ.

ಆಯೋಗವೇ ದಾಖಲೆ ಪರಿಶೀಲನೆ ನಡೆಸುತ್ತದೆ. ಆದರೆ ರಾಜಕೀಯ ದ್ವೇಷದಿಂದ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.ಸುಳ್ಳು ಆರೋಪ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here