ಗರ್ಡಡಿ ಯುವಕ ಮಂಡಲದ ಅಧ್ಯಕ್ಷರಾಗಿ ಪ್ರವೀಣ್ ಎನ್.ಕಾರ್ಯದರ್ಶಿಯಾಗಿ ವಿಕೇಶ್ ಆಚಾರ್ಯ

0

ಯುವಕ ಮಂಡಲ (ರಿ.), ಗರ್ಡಾಡಿ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಮಂಡಲದ ಮುಂದಿನ ಕಾರ್ಯ ಚಟುವಟಿಕೆಗಳಿಗೆ ನವಚೈತನ್ಯ ತುಂಬುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಯುವಜನತೆಯ ಸಂಘಟನಾ ಶಕ್ತಿ, ಸಾಮಾಜಿಕ ಕಳಕಳಿ ಹಾಗೂ ಸೇವಾ ಮನೋಭಾವಕ್ಕೆ ವೇದಿಕೆಯಾಗಿರುವ ಯುವಕ ಮಂಡಲವು ಸಮಾಜಮುಖಿ ಚಟುವಟಿಕೆಗಳ ಮೂಲಕ ಸಮಾಜದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುವ ಆಶಯ ಹೊಂದಿದೆ. ಯುವಶಕ್ತಿಯನ್ನು ಸಕಾರಾತ್ಮಕ ಕಾರ್ಯಗಳತ್ತ ಮುನ್ನಡೆಸುವ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮತ್ತು ಸಾಮಾಜಿಕ ಸೇವೆಯ ಮೂಲಕ ಸಮಾಜದಲ್ಲಿ ಸೌಹಾರ್ದದ ಸೇತುವೆ ನಿರ್ಮಿಸುವ ಮಹತ್ತರ ಆಶಯದೊಂದಿಗೆ ಮಂಡಲವು ಕಾರ್ಯನಿರ್ವಹಿಸುತ್ತಿದೆ.

ಮಂಡಲದ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಪ್ರವೀಣ್ ಎನ್., ಕಾರ್ಯದರ್ಶಿಯಾಗಿ ವಿಕೇಶ್ ಆಚಾರ್ಯ ಹಾಗೂ ಕೋಶಾಧಿಕಾರಿಯಾಗಿ ಸುಕೇಶ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನಾಗರಾಜ್ ಹಾಗೂ ರಂಜಿತ್ ಪೂಜಾರಿ ಮತ್ತು ಜಂಟಿ ಕಾರ್ಯದರ್ಶಿಯಾಗಿ ರಾಕೇಶ್ ಪೂಜಾರಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here