ಅ.11: ವಿದ್ವತ್ ಪಿಯು ಕಾಲೇಜಿನಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪರೀಕ್ಷೆ

0

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜು, ಶೈಕ್ಷಣಿಕ ಶ್ರೇಷ್ಠತೆ ಹಾಗೂ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಹೆಸರುವಾಸಿಯಾದ ಶಿಕ್ಷಣ ಸಂಸ್ಥೆಯಾಗಿದ್ದು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಅ. 11 ರಂದು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಶಕ್ತಿನಗರದ ವಿದ್ವತ್ ಪಿಯು ಕಾಲೇಜಿನಲ್ಲಿ ಪ್ರತಿಭಾ ಪರೀಕ್ಷೆಯನ್ನು ಆಯೋಜಿಸಲಾಗಿದೆ.

ವಿದ್ಯಾರ್ಥಿಗಳಲ್ಲಿರುವ ಶೈಕ್ಷಣಿಕ ಪ್ರತಿಭೆಯನ್ನು ಗುರುತಿಸಿ, ಅದನ್ನು ಪೋಷಿಸುವುದು ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ನೆರವಿನೊಂದಿಗೆ ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸುವುದು ಈ ಪ್ರತಿಭಾ ಪರೀಕ್ಷೆಯ ಉದ್ದೇಶವಾಗಿದೆ.ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರುವ ವಿದ್ಯಾರ್ಥಿಗಳನ್ನು ವಿದ್ಯಾರ್ಥಿವೇತನ ಸೌಲಭ್ಯಕ್ಕೆ ಪರಿಗಣಿಸಲಾಗುವುದು. ಇದರ ಮೂಲಕ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವುದರ ಜೊತೆಗೆ ತಮ್ಮ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಸಹಕಾರಿಯಾಗಲಿದೆ.

ವಿದ್ವತ್ ಪಿಯು ಕಾಲೇಜು ತನ್ನ ಪ್ರಥಮ ಬ್ಯಾಚ್‌ನಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಿಸಿದೆ. *KCET ಎಂಜಿನಿಯರಿಂಗ್‌ನಲ್ಲಿ ರಾಜ್ಯಕ್ಕೆ *7ನೇ ರ‍್ಯಾಂಕ್* ಹಾಗೂ 4 ಮಂದಿ ವಿದ್ಯಾರ್ಥಿಗಳಿಗೆ *AIIMS* ಪ್ರವೇಶ ದೊರೆತಿರುವುದು ಸಂಸ್ಥೆಯ ಶೈಕ್ಷಣಿಕ ಸಾಧನೆಗೆ ಸಾಕ್ಷಿಯಾಗಿದೆ.ರಾಜ್ಯದ ಯಾವುದೇ ಪ್ರದೇಶದಿಂದ ಪ್ರತಿಭಾವಂತ ಮತ್ತು ಉನ್ನತ ಶಿಕ್ಷಣದ ಆಶಯ ಹೊಂದಿರುವ *ಎಸ್‌ಎಸ್‌ಎಲ್‌ಸಿ (SSLC)* ವಿದ್ಯಾರ್ಥಿಗಳು ಈ ಪ್ರತಿಭಾ ಪರೀಕ್ಷೆಯಲ್ಲಿ ಭಾಗವಹಿಸಬಹುದಾಗಿದೆ.*ಸ್ಥಳ*: ವಿದ್ವತ್ ಪಿಯು ಕಾಲೇಜು, 1-435, ಶಕ್ತಿನಗರ, ಕುವೆಟ್ಟು ಗ್ರಾಮ, ಗುರುವಾಯನಕೆರೆ, ಬೆಳ್ತಂಗಡಿ ತಾಲೂಕು, ದ.ಕ. ಕರ್ನಾಟಕ. 574-217 ದಿನಾಂಕ: *11 ಅಕ್ಟೋಬರ್ 2026*ಅರ್ಹತೆ: *ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು.*ಉದ್ದೇಶ: *ಪ್ರತಿಭೆಯನ್ನು ಗುರುತಿಸುವುದು ಮತ್ತು ವಿದ್ಯಾರ್ಥಿವೇತನ ಪುರಸ್ಕಾರ*ನೋಂದಣಿ: *ಉಚಿತ*ನೋಂದಣಿಗಾಗಿ ಸಂಪರ್ಕಿಸಿ:📞 *7618775602*📞 *7618775600**For Online Registration https://www.vidvath.org/talent-test/

LEAVE A REPLY

Please enter your comment!
Please enter your name here