ಕೊಕ್ಕಡದಲ್ಲಿ ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿಯ 5ನೇ ನೂತನ ಶಾಖೆ ಉದ್ಘಾಟನೆ: ಪರಸ್ಪರ ಸೇವಾ ಮನೋಭಾವದಿಂದ ಸಹಕಾರಿ ಬೆಳೆಯಲಿ : ವಂ. ಅನಿಲ್ ಡಿಸಿಲ್ವ: ದ. ಕ ಜಿಲ್ಲೆಯಲ್ಲಿ 1ಸಾವಿರ ಮಿಕ್ಕಿ ಸಹಕಾರಿ ಸಂಘಗಳಿವೆ : ನಾಗೇಶ್ ಕುಮಾರ್ ಗೌಡ: ರಾಷ್ಟ್ರೀಕೃತ ಬ್ಯಾಂಕ್ ಕಿಂತ ಉತ್ತಮ ಸೇವೆ ನೀಡುತ್ತಿರುವ ಬೆಳ್ತಂಗಡಿ ಕ್ಯಾಥೋಲಿಕ್ ಸಹಕಾರಿ :ಕುಶಾಲಪ್ಪ ಗೌಡ

0

ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ಕಳೆದ 29ವರ್ಷದಿಂದ ಕಾರ್ಯಾಚರಿಸುತ್ತಿರುವ ನಾರಾವಿ, ಅಳದಂಗಡಿ, ವೇಣೂರು, ಸೋಮಂತಡ್ಕದಲ್ಲಿ ಶಾಖೆಗಳ್ಳನ್ನು ಹೊಂದಿರುವ ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿಯ 5ನೇ ನೂತನ ಶಾಖೆ ಕೊಕ್ಕಡದಲ್ಲಿ ಸಮ್ಯಕ್ ಕಾಂಪ್ಲೆಕ್ಸ್ ನಲ್ಲ್ಲಿ ಉದ್ಘಾಟನೆಗೊಂಡಿತು.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ (ಗ್ರಾಮೀಣ) ನಾಗೇಶ್ ಕುಮಾರ್ ಗೌಡ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು. ಕೊಕ್ಕಡ ಸಂತ ಜೋನ್ ಬ್ಯಾಪ್ಟಿಸ್ಟ್ ಚರ್ಚ್ ಧರ್ಮಗುರುವಂದನೀಯ ಫಾ| ಅನಿಲ್ ಪ್ರಕಾಶ್ ಡಿಸಿಲ್ವ ಆಶೀರ್ವಚನಗೈದರು. ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಸಹಕಾರ ಸಂಘ ಅಧ್ಯಕ್ಷ ಹೆನ್ರಿ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರು, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಭದ್ರತಾ ಕೊಠಡಿ ಉದ್ಘಾಟಿಸಿದರು.

ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ. ಗಣಕ ಯಂತ್ರ ಉದ್ಘಾಟಿಸಿದರು. ಕೊಕ್ಕಡ ಬದ್ರಿಯಾ ಜುಮ್ಮಾ ಮಸೀದಿ ಖತೀಬರು ಅಬ್ದುಲ್ ರಾಝಿಕ್ ಆಲ್ ಖಾಸಿಮಿ,ಕೊಕ್ಕಡ ಸಮ್ಯಕ್ ಕಾಂಪ್ಲೆಕ್ಸ್ ಮಾಲಕ ಪಣಿರಾಜ ಜೈನ್, ಇಂಫಾನ್ಟ್ ಜಿಸಸ್ ಚರ್ಚ್ ಧರ್ಮ ಗುರು ವಂ. ಫಾ. ಗ್ರೇಸಿಯಸ್ ಅಲ್ವರಿಸ್, ಉಪಾಧ್ಯಕ್ಷ ಡೇನಿಸ್ ಸಿಕ್ವೆರ, ಹಿರಿಯ ನಿರ್ದೇಶಕರಾದ ಜೇಮ್ಸ್ ಡಿಸೋಜ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಐವನ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು. ಆಡಳಿತ ಮಂಡಳಿ ನಿರ್ದೇಶಕರುಗಳಾದ ಜೋಸೆಫ್ ಪೀಟರ್ ಸಲ್ದಾನ್ಹ, ಹೆರಾಲ್ಡ್ ಪಿಂಟೊ, ತೋಮಸ್‌ ಆ‌ರ್. ನೊರೊನ್ಹ,ವಿನ್ಸೆಂಟ್ ಪ್ರಕಾಶ್ ಪಿಂಟೊ,ಅಲ್ಫೋನ್ಸ್ ರೊಡ್ರಿಗಸ್, ಪ್ರಸಾದ್ ಪಿಂಟೊ, ರಫಾಯಲ್ ವೇಗಸ್,ಶ್ರೀಮತಿ ಪೌಲಿನ್ ರೇಗೊ,ಶ್ರೀಮತಿ ಪ್ಲಾವಿಯಾ ಡಿಸೋಜ,ವೃತ್ತಿಪರ ನಿರ್ದೇಶಕರಾದ ರಿಯೋ ಮೈಕಲ್ ರೊಡ್ರಿಗಸ್,ವಿನಯ್ ಜೋನ್ಸನ್ ಡಿಸೋಜ, ಕೊಕ್ಕಡ ಶಾಖಾ ವ್ಯವಸ್ಥಾಪಕ ಅಜಯ್ ರೋಡ್ರಿಗಸ್, ಮುಖ್ಯ ಪ್ರವರ್ತಕ ಸಿರಿಲ್ ಪಾಯಿಸ್, ಮಾಜಿ ಅಧ್ಯಕ್ಷ ಎಲೋಸಿಯಸ್ ಲೋಬೊ, ಮಾಜಿ ಉಪಾಧ್ಯಕ್ಷರುಗಳಾದ ಅಲ್ಫೋನ್ಸ್ ಫ್ರಾಂಕೋ, ಜೋಸೆಫಿನ್ ಪಿಂಟೊ, ಮಾಜಿ ನಿರ್ದೇಶಕ ರುಡಾಲ್ಫ್ ಡಿಸೋಜ, ಜೋಕಿಂ ಕ್ರಸ್ತಾ ಭಾಗವಹಿಸಿದ್ದರು. ವಿವಿಧ ಶಾಖಾ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು, ಸಂತ ಜೋನ್ ಬ್ಯಾಪ್ಟಿಸ್ಟ್ ಚರ್ಚ್ ಮತ್ತು ಇನ್ಫಫೆಂಟ್ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ, ಕಾರ್ಯದರ್ಶಿ, ವಾಳೆಯ ಗುರಿಕಾರರು ಸಮಸ್ತ ಕ್ರೈಸ್ತ ಭಾಂದವರು ಭಾಗವಹಿಸಿದ್ದರು.

ಅಧ್ಯಕ್ಷ ಹೆನ್ರಿ ಲೋಬೊ ಸ್ವಾಗತಿಸಿ, ಡಾ. ವಿಶಾಲ್ ಪಿಂಟೊ ಕಾರ್ಯಕ್ರಮ ನಿರೂಪಿಸಿ ಉಪಾಧ್ಯಕ್ಷ ಡೇನಿಸ್ ಸಿಕ್ವೆರ ವಂದಿಸಿದರು. ಸಿಬ್ಬಂದಿ ವರ್ಗ ಪ್ರಾರ್ಥಿಸಿದರು.ಸನ್ಮಾನ ಕಳೆದ 25ವರ್ಷಗಳಿಂದ ಕ್ರಿಸ್ಮಸ್ ಸಂದರ್ಭದಲ್ಲಿ ಸಂತ ಕ್ಲೋಸ್ ದ. ಕ. ಜಿಲ್ಲೆಯಲ್ಲಿ ಬೈಕ್ ನಲ್ಲಿ ಸವಾರಿ ಮಾಡಿ ಜನಾನುರಾಗಿಯಾಗಿದ್ದ ವಿನ್ಸೆoನ್ ಮಿನೆಜೆಸ್ ಇವರನ್ನು ಗೌರವಿಸಲಾಹಿತು. ಇಂಜಿನಿಯರ್ ಆಲೆನ್ ಡಿಸೋಜ, ಎಲೆಕ್ಟ್ರಿಸಿಯಾನ್ ಪ್ರದೀಪ್, ಪ್ಯಾಬ್ರಿಕೇಶನ ಅರುಣ್ ಫೆರ್ನಾಂಡಿಸ್, ಸಿ ಸಿ ಕ್ಯಾಮರಾ ಲಕ್ಷ್ಮಿ ನಾರಾಯಣ, ಸಾಫ್ಟ್ ವೇರ್ ಪ್ರಕಾಶ್ ಕೆ. ಇನ್ನಿತರ ಕಾರ್ಮಿರನ್ನು ಗೌರವಿಸಲಾಯಿತು.

ಪ್ರಥಮ ಉಳಿತಾಯ ಖಾತೆ ಜಾನ್ಸನ್ ಗಲ್ಬಾವ್, ನಿರಖು ಠೇವಣಿ ಜೀವನ್ ಡಿಸೋಜ ಇವರಿಗೆ ನಿರ್ದೇಶಕ ತೊಮಸ್ ಆರ್. ನೋರೊನ್ಹ ವಿತರಿಸಿದರು. ಕೊಕ್ಕಡ, ನೆಲ್ಯಾಡಿಯ ಚರ್ಚ್ ಪಾಲನ ಮಂಡಳಿ ಸದಸ್ಯರು ಸಹಕರಿಸಿದ ಜನ್ಸಾನ್ ಗಲ್ಬಾವ್, ರಿತೇಶ್ ಸ್ಟೇಲ್ಲಾ, ಪ್ರಕಾಶ್, ಮೌರಿಸ್ ಡಿಸೋಜಾ, ಮಾರ್ಕ್ ಡಿಸೋಜ, ವನಿತಾ ಮೊಂತೇರೋ, ಸ್ಯಾಂಡ್ರಾ ಲೋಬೊ, ಮೌರಿಸ್ ಮೊಂತೇರೋ, ಫ್ಲೋರಿನ್, ಜಾನ್ ಮೊಂತೇರೋ, ತೊಮಸ್ ಡಿಸೋಜ, ಹೆರಾಲ್ಡ್ ಡಿಸೋಜ, ಸ್ಮಿತಾ ರೋಡ್ರಿಗಸ್ ಇವರನ್ನು ಗೌರವಿಸಲಾಹಿತು.

ಸಂಘದ ಹಿನ್ನೆಲೆ ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಸಹಕಾರ ಸಂಘವು 1997-1998ರಲ್ಲಿ ಸುಮಾರು 604 ಸದಸ್ಯರನ್ನು ಒಳಗೊಂಡು ರೂ. 6 ಲಕ್ಷದಷ್ಟು ಪಾಲು ಬಂಡವಾಳದೊಂದಿಗೆ 1998 ಜನವರಿ 26ರಂದು “ಪರಸ್ಪರ ಸಹಕಾರ” ಎಂಬ ಧೈಯ ವಾಕ್ಯವನ್ನು ಮುಂದಿಟ್ಟುಕೊಂಡು ಅಂದಿನ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂದನೀಯ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜರವರಿಂದ ಆಶೀರ್ವಚನದೊಂದಿಗೆ ಸಂಘ ಸ್ಥಾಪನೆಗೊಂಡಿತು.

ಅಂದಿನ ಬೆಳ್ತಂಗಡಿಯ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ವಸಂತ ಬಂಗೇರರಿಂದ ಉದ್ಘಾಟನೆಗೊಂಡು ಸುಮಾರು ನಾಲ್ಕು ವರ್ಷಗಳ ಕಾಲ ಬೆಳ್ತಂಗಡಿಯ ಪಿಂಟೊ ಕಾಂಪ್ಲೆಕ್ಸ್‌ ನಲ್ಲಿ ಕಾರ್ಯಾಚರಣೆ ಮಾಡುತ್ತಿತ್ತು. ಸಂಘಕ್ಕೆ 2001ರಲ್ಲಿ ಸುಮಾರು 1000ಚ.ಅಡಿ ವಿಸ್ತೀರ್ಣದ ಸ್ವಂತ ಕಟ್ಟಡಕ್ಕೆ ಸ್ಥಳವನ್ನು ಖರೀದಿಸಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಬಿಷಪ್ಲಾರೆನ್ಸ್ ಮುಕ್ಕುಝಿಯವರಿಂದ ಆಶೀರ್ವಚನಗೊಂಡಿತು. ಸಹಕಾರ ಇಲಾಖೆಯ ಸಹಕಾರದಿಂದ ಕಾನೂನು ಸಲಹೆಗಾರರ ಸಲಹೆಯಂತೆ 2007ರಲ್ಲಿ ನಾರಾವಿ ಶಾಖೆ, 2012ರಲ್ಲಿ ಅಳದಂಗಡಿ ಶಾಖೆ, 2021ರಲ್ಲಿ ವೇಣೂರು ಶಾಖೆ, 2026ಮೇಯಲ್ಲಿ ಸೋಮಂತಡ್ಕದಲ್ಲಿ 4ನೇ ಶಾಖೆಯನ್ನು ತೆರೆದು ವ್ಯವಹರಿಸಲು ಅನೇಕ ಮಹನೀಯಾರು ಸಹಕರಿಸಿರುತ್ತಾರೆ. ಈ ಸಮಯದಲ್ಲಿ ಸಹಕಾರ ಸಂಘವು ಹತ್ತು ಹಲವು ಜನಪರಕೆಲಸಗಳನ್ನು ಕೈಗೊಂಡಿರುತ್ತದೆ. ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ, ವೈದ್ಯಕೀಯ ನಿಧಿಯಿಂದ ವೈದ್ಯಕೀಯ ನೆರವು, ಧಾರ್ಮಿಕ ದತ್ತಿ ನಿಧಿಯಿಂದ ಮತ್ತು ಸಾರ್ವಜನಿಕ ಹಿತಾಸಕ್ತಿ ನಿಧಿಯಿಂದ ಧಾರ್ಮಿಕ ಕೆಲಸಗಳಿಗೆ ಅನುದಾನ, ಕಡಿಮೆ ಬಡ್ಡಿದರದಲ್ಲಿಗ್ರಾಹಕರಿಗೆ ಸಾಲ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ.ಠೇವಣಿದಾರರಿಗೆ ಆಕರ್ಷಕ ಬಡ್ಡಿಯನ್ನು ನೀಡುತ್ತಿದೆ. ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಪ್ರಸ್ತುತ ಸಹಕಾರ ಸಂಘವು 2841 ಸದಸ್ಯರನ್ನು ಒಳಗೊಂಡು ರೂ.95 ಲಕ್ಷ ಪಾಲು ಬಂಡವಾಳ ಮೊತ್ತವನ್ನು ಸಂಗ್ರಹಿಸಿ ರೂಪಾಯಿ 128ಕೋಟಿ ಮೊತ್ತದ ಠೇವಣಿ ಸಂಗ್ರಹಿಸಿ ಅನೇಕ ನಿಧಿಗಳನ್ನು ಸ್ಥಾಪಿಸಿ ರೂ.149ಕೋಟಿ ದುಡಿಯುವ ಬಂಡವಾಳ ಹೊಂದಿರುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ಸಹಕಾರ ಸಂಘವು ಸರಿಸುಮಾರು ರೂ. 375ಕೋಟಿ ವ್ಯವಹಾರ ನಡೆಸಿ ರೂ. 2.13ಕೋಟಿ ನಿವ್ವಳ ಲಾಭಗಳಿಸಿರುತ್ತದೆ. ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಕಳೆದ 5ವರ್ಷದಿಂದ ಶೇಕಡ 25 ಪಾಲು ಮುನಾಫೆಯನ್ನು ನೀಡುತ್ತಿದೆ. ಪ್ರಸ್ತುತ ಆಡಳಿತ ಮಂಡಳಿಯು ಸದಸ್ಯರಿಗೆ ನೀಡಿದ ಭರವಸೆಗೆ ಉತ್ತರಿಸುತ್ತ ಹಾಗೂ ಸರ್ವ ಸದಸ್ಯರ ವಿನಂತಿ ಮೇರೆಗೆ ಸಹಕಾರ ಸಂಘವು ಸ್ವಂತ ಜಾಗ ಖರೀದಿಸಿ ಕಟ್ಟಡ ನಿರ್ಮಿಸಿ 2025, ಜನವರಿ 23ರಂದು ಭವ್ಯವಾದ ಎಲ್ಲಾ ಸೌಲಭ್ಯಗಳನ್ನೊಳಗೊಂಡ ‘ಆಶಾಕಿರಣ’ ಎಂಬ ವಾಣಿಜ್ಯ ಸಂಕೀರ್ಣವು ಉದ್ಘಾಟನೆಗೊಂಡಿದೆ.

ಅಳದಂಗಡಿ ಶಾಖೆಗೆ ಸ್ವಂತ ಕಟ್ಟಡ ಖರೀದಿಸಲಾಗಿದ್ದು ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ನಂತರದ ಎರಡು ನೂತನ ಶಾಖೆಯ ಭರವಸೆ ನೀಡಲಾಗಿದ್ದು ಇದೀಗ ಸೋಮಂತಡ್ಕದಲ್ಲಿ ಮೇ. 20ರಂದು ನೂತನ ಶಾಖೆ ಉದ್ಘಾಟನೆಗೊಂಡು 4ತಿಂಗಳಲ್ಲಿ ರೂ. 7ಕೋಟಿ ವ್ಯವಹಾರ ಮಾಡಿದೆ.

LEAVE A REPLY

Please enter your comment!
Please enter your name here