ಕ್ಲಿನಿಕ್ ಗೆ ಬೆಂಕಿ ಹಚ್ಚಿದ ಕೃತ್ಯ ಖಂಡನಾರ್ಹ: ಬಿ. ಜಯರಾಮ ನೆಲ್ಲಿತ್ತಾಯ

0

ಬೆಳ್ತಂಗಡಿ: ನಾವೂರಿನ ಡಾ. ಪ್ರದೀಪ್ ಅವರ ಆರೋಗ್ಯ ಕ್ಲೀನಿಕ್‌ಗೆ ಬೆಂಕಿ ಹಚ್ಚಿರುವ ಕೃತ್ಯ ಅತ್ಯಂತ ಹೇಯವಾಗಿದ್ದು, ಸುಸಂಸ್ಕೃತ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಧರ್ಮಪ್ರಸಾರ ಪ್ರಮುಖ್, ಶಿಶಿಲದ ಬಿ. ಜಯರಾಮ ನೆಲ್ಲಿತ್ತಾಯ ಖಂಡಿಸಿದ್ದಾರೆ.

ಡಾ. ಪ್ರದೀಪ್ ಅವರು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದಿರುವ ಆದರ್ಶ ವ್ಯಕ್ತಿ. ಇಂತಹವರ ಕ್ಲೀನಿಕ್‌ಗೆ ಬೆಂಕಿ ಹಚ್ಚಿರುವುದು ಖಂಡನಾರ್ಹ ಎಂದು ಅವರು ಹೇಳಿದ್ದಾರೆ.ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ, ಕೃತ್ಯಕ್ಕೆ ಕಾರಣರಾದವರನ್ನು ಕೂಡಲೇ ಪತ್ತೆಹಚ್ಚಿ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here