ಗುರುವಾಯನಕೆರೆ ಬಂಟರ ಭವನದ ಆವರಣದಲ್ಲಿ ನೂತನ ಕಟ್ಟೆಯಲ್ಲಿ ಗುಳಿಗ ದೈವದ ಪ್ರತಿಷ್ಠೆ

0

​ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘದ (ರಿ.) ಬೆಳ್ತಂಗಡಿ ಇದರ ವತಿಯಿಂದ ಗುರುವಾಯನಕೆರೆ ಬಂಟರ ಭವನದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಕಟ್ಟೆಯಲ್ಲಿ ಗುಳಿಗ ದೈವದ ಪ್ರತಿಷ್ಠಾ ಮಹೋತ್ಸವವು ಅಕ್ಟೋಬರ್ 11, 2026ರ ಆದಿತ್ಯವಾರದಂದು ಜರುಗಲಿದೆ.

ಕುಂಟಿನಿ ಸತೀಶ್ ಭಾಂಗಿಣ್ಣಾಯ ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.

ಈ ಧಾರ್ಮಿಕ ಸಮಾರಂಭಕ್ಕೆ ಸಮಸ್ತ ಬಂಧು-ಮಿತ್ರರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಕೃಪಾಪಾತ್ರರಾಗಬೇಕಾಗಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯು ಕೋರಿದ್ದಾರೆ.

LEAVE A REPLY

Please enter your comment!
Please enter your name here