






ಉಜಿರೆ: ಕುಂದಾಪುರದಿಂದ ಹೊರಟು ಮಂಗಳೂರು ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿದ್ದ ಯುವತಿಯೊಬ್ಬರಿಗೆ ತೀವ್ರ ಅನಾರೋಗ್ಯ ಉಂಟಾದಾಗ,ಕೂಡಲೇ ಸಹಪ್ರಯಾಣಿಕರ ಜೊತೆಗೂಡಿ ಕೆಎಸ್ ಆರ್ ಟಿ ಸಿ ಚಾಲಕ,ನಿರ್ವಾಹಕ ಸ್ಪಂದಿಸಿ,ಯುವತಿಯನ್ನು ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಿಸಿ,ಮಾನವೀಯತೆ ಮೆರೆದ ಘಟನೆ ಅ.6ರಂದು ಸಂಜೆ 6.15ರ ಸುಮಾರಿಗೆ ನಡೆದಿದೆ.ಬಸ್ ಬೆಳ್ತಂಗಡಿಯಿಂದ ಹೊರಟ ಕೂಡಲೇ ಯುವತಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಬಸ್ ನಲ್ಲೇ ಆಕೆಗೆ ತುರ್ತು ಆರೈಕೆ ಮಾಡಲಾಯಿತು.


ತದಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಯುವತಿಯನ್ನು ದಾಖಲಿಸಿ,ಮನೆಯವರಿಗೆ ವಿಷಯ ತಿಳಿಸಲಾಗಿದೆ.ಬಸ್ ಚಾಲಕ ಸಂಗನ ಗೌಡ,ನಿರ್ವಾಹಕ ನಂದೀಶ್ ಅವರು ಯುವತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಯುವತಿ ಜ್ವರದಿಂದ ಬಳಲುತ್ತಿದ್ದು,ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.









